ಪ್ರಮುಖ ಸುದ್ದಿಮೈಸೂರು

5 ಕೆಜಿ ಹೆಚ್.ಪಿ. ಸಿಲಿಂಡರ್ ಮಾರುಕಟ್ಟೆಗೆ : ನಕಲಿ ಸಿಲಿಂಡರ್ ಗಳಿಂದ ಜಾಗೃತರಾಗಿರಿ

ಮೈಸೂರು. ಡಿ.29: ಹೆಚ್ ಪಿ ಕಂಪನಿ ವತಿಯಿಂದ ಅಪಾಯ ರಹಿತ  5 ಕೆಜಿ ಸುರಕ್ಷಿತ ಗ್ಯಾಸ್ ಸಿಲಿಂಡರ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ ಎಂದು ಹೆಚ್.ಪಿ ವಿತರಕರಾದ ಮೆಹುಲ್ ಜೆ ಪಟೇಲ್ ತಿಳಿಸಿದರು.

ಇದೊಂದು ಸುರಕ್ಷಿತ ಸಿಲಿಂಡರ್ ಆಗಿದ್ದು ಇದನ್ನು ಪಡೆಯಲು ಮುಂಗಡವಾಗಲಿ ಅಥವಾ ಕಾಯ್ದಿರಿಸುವಿಕೆಯಾಗಲಿ ಬೇಕಾಗಿಲ್ಲ. ತಮ್ಮ ನಿವಾಸದ ಬಳಿಯಿರುವ ಕಿರಾಣಿ ಅಂಗಡಿಗಳಲ್ಲಿಯೇ ಲಭ್ಯವಿರಲಿದೆ, ಇದನ್ನು ಗ್ಯಾಸ್ ಸ್ಟೌವ್, ಗೀಜರ್ ಹಾಗೂ ಲೈಟ್ ಆಗಿಯೂ ಸಹ ಬಳಸಬಹುದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯಾವುದೇ ಪ್ರಮಾಣಪತ್ರ ಇಲ್ಲದ ನಕಲಿ ಸಿಲೆಂಡರ್ ನಿಂದ ಪ್ರಾಣಹಾನಿಯಾಗುತ್ತಿದ್ದು  ಆದ್ದರಿಂದ ನಕಲಿ ಸಿಲಿಂಡರ್ ಬಗ್ಗೆ ಜಾಗೃತರಾಗಿರಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಗ್ಯಾಸ ವಿತರಕ ಕೃಷ್ಣ ಮಾತನಾಡಿ, ಪ್ರಧಾನ ಮಂತ್ರಿ ಉಜ್ವಲ ಯೋಜನೆ 2ರ ಅಡಿಯಲ್ಲಿ ಗ್ಯಾಸ್ ಸಂಪರ್ಕ ರಹಿತ  ಬಿಪಿಎಲ್ ಕಾರ್ಡ್ದಾರರಿಗೆ ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸಲಿದ್ದು. ಅರ್ಹರು ಅರ್ಜಿ ಸಲ್ಲಿಸಬಹುದು, ಇದೊಂದು ಸಂಪೂರ್ಣ ಉಚಿತ ಗ್ಯಾಸ್ ಸಂಪರ್ಕವಾಗಿದೆ ಎಂದು ತಿಳಿಸಿದರು. ಮಾಹಿತಿಗಾಗಿ ಬಳಿಯಿರುವ ಗ್ಯಾಸ್ ವಿತರಕರನ್ನು ಸಂಪರ್ಕಿಸಬಹುದೆಂದು ತಿಳಿಸಿದರು.‌

ಕಾಶಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: