ದೇಶಪ್ರಮುಖ ಸುದ್ದಿ

ಜೆಡಿಯು ಸೇರಿದ RLSP ಉಪಾಧ್ಯಕ್ಷ: ಬಿಹಾರದಲ್ಲಿ ಎನ್‍ಡಿಎ ತಲೆಬಿಸಿಗೆ ಮದ್ದು?

ಪಾಟ್ನಾ (ಡಿ.29): ಇತ್ತೀಚೆಗಷ್ಟೇ ಎನ್.ಡಿ.ಎ ಮೈತ್ರಿಕೂಟದಿಂದ ಆರ್.ಎಲ್.ಎಲ್.ಎಸ್ಪಿ (ರಾಷ್ಟ್ರೀಯ ಲೋಕ ಸಮತಾ ಪಕ್ಷ) ಮುಖ್ಯಸ್ಥ ಉಪೇಂದ್ರ ಕುಶ್ವಾಹ ಹೊರನಡೆದು ಬಿಜೆಪಿಗೆ ಆಘಾತ ನೀದಿದ್ದರು. ಆದರೆ ಅದೇ ಪಕ್ಷದ ಉಪಾಧ್ಯಕ್ಷ ಭಗವಾನ್ ಸಿಂಗ್ ಕುಶ್ವಾಹ ಅವರು ಜೆಡಿಯು ಸೇರುವ ಮೂಲಕ ತಮ್ಮ ಬೆಂಬಲ ಎನ್.ಡಿ.ಎ.ಗೆ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ.

ಮಹಾಘಟಬಂಧನಕ್ಕೆ ಬೆಂಬಲ ನೀಡಿದ್ದ ಉಪೇಂದ್ರ ಕುಶ್ವಾಹ ಅವರಿಗೆ ಇದು ತೀವ್ರ ಮುಖಭಂಗವನ್ನುಂಟು ಮಾಡಿದೆ. ಆರ್.ಎಲ್.ಎಸ್ಪಿ ಉಪಾಧ್ಯಕ್ಷರಾದ ಭಗವಾನ್ ಸಿಂಗ್ ಕುಶ್ವಾಹ ಅವರು ತಮ್ಮ ಬೆಂಬಲಿಗರೊಂದಿಗೆ ಶುಕ್ರವಾರ ಜೆಡಿಯು ಪಕ್ಷಕ್ಕೆ ಸೇರಿದರು. 2019ರ ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆಯೇ ಎನ್.ಡಿ.ಎ ತೊರೆದು, ಆಘಾತ ನೀಡಲು ಉಪೇಂದ್ರ ಕುಶ್ವಾಹ ಮುಂದಾಗಿದ್ದರು. ಬಿಹಾರದಲ್ಲಿ ಸೀಟು ಹಂಚಿಕೆ ವಿಷಯದಲ್ಲಿ ಎದ್ದ ಗೊಂದಲವೇ ತಾವು ಬಿಜೆಪಿ ಮೈತ್ರಿಕೂಟ ತೊರೆಯುವುದಕ್ಕೆ ಕಾರಣ ಎಂದಿದ್ದರು.

ಆದರೆ ಅದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿರುವ ಭಗವಾನ್ ಕುಶ್ವಾಹ, 2019ರ ಲೋಕಸಭಾ ಚುನಾವಣೆಯಲ್ಲಿ ಎನ್.ಡಿ.ಎ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ. ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎನ್ನುವ ಮೂಲಕ ಮಹಾಘಟಬಂಧನಕ್ಕೂ ಮುಖಭಂಗವನ್ನುಂಟು ಮಾಡಿದ್ದಾರೆ. ಭಗವಾನ್ ಕುಶ್ವಾಹ ಅವರ ನಡೆ ಎನ್.ಡಿ.ಎ ಸರ್ಕಾರಕ್ಕೆ ಕೊಂಚ ನಿರಾಳತೆ ಉಂಟು ಮಾಡಿದೆ. (ಎನ್.ಬಿ)

Leave a Reply

comments

Related Articles

error: