ಮೈಸೂರು

2019 ರ ಹೊಸ ವರ್ಷಾಚರಣೆ ಹಿನ್ನೆಲೆ : ಮೈಸೂರು ನಗರ ಪೊಲೀಸರಿಂದ ಸಕಲ ರೀತಿಯ ಭದ್ರತಾ ವ್ಯವಸ್ಥೆ ; ಡಾ.ಎ.ಸುಬ್ರಹ್ಮಣ್ಯೇಶ್ವರರಾವ್

ಮೈಸೂರು,ಡಿ.29:- ಸಾಂಸ್ಕೃತಿಕ ನಗರವಾದ ಮೈಸೂರಿನಲ್ಲಿ 2019 ರ ಹೊಸ ವರ್ಷಾಚರಣೆಯನ್ನು ವಿವಿಧ ಹೋಟೆಲ್, ಕ್ಲಬ್, ರೆಸ್ಟೋರೆಂಟ್, ಪಬ್ ಇತ್ಯಾದಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಚರಿಸಲಿದ್ದು, , ಅದಕ್ಕೆ ಸೂಕ್ತವಾದ ರೀತಿಯಲ್ಲಿ ಸುರಕ್ಷತೆ, ಭದ್ರತೆ, ಹಾಗೂ ಸುಗಮ ಸಂಚಾರಕ್ಕಾಗಿ ಸೂಕ್ತ ವ್ಯವಸ್ಥೆಯನ್ನು ಮೈಸೂರು ನಗರ ಪೊಲೀಸ್ ವತಿಯಿಂದ ಹಮ್ಮಿಕೊಳ್ಳಲಾಗಿರುತ್ತದೆ. ಇದರ ಸಂಬಂಧ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದ್ದಾರೆ.

ಉಪ ಪೊಲೀಸ್ ಆಯುಕ್ತರು 2, ಸಹಾಯಕ ಪೊಲೀಸ್ ಆಯುಕ್ತರು 10, ಪೊಲೀಸ್ ಇನ್ಸಪೆಕ್ಟರ್ 29,  ಪೊಲೀಸ್ ಸಬ್‍ ಇನ್ಸಪೆಕ್ಟರ್ 09, ಸಹಾಯಕ ಪೊಲೀಸ್ ಸಬ್‍ ಇನ್ಸಪೆಕ್ಟರ್ 63, ಹೆಡ್‍ ಕಾನ್ಸಟೇಬಲ್ /ಕಾನ್ಸಟೇಬಲ್ 520, ಗರುಡಾ ಗಸ್ತು ವಾಹನಗಳು 36, ಸಿಎಆರ್ ತುಕಡಿಗಳು 10,ಕೆ.ಎಸ್.ಆರ್.ಪಿ ತುಕಡಿಗಳು 03,ಕಮಾಂಡೋಗಳು 30, ಚಾಮುಂಡಿ ಮಹಿಳಾ ಪಡೆ 03, ವಿಧ್ವಂಸಕ ಕೃತ್ಯ ತಡೆ ತಂಡ 02,ಚೀತಾ ಗಸ್ತು ಬೈಕ್‍ಗಳು 34,ಕೋಬ್ರಾ ಸಂಚಾರ ಗಸ್ತು ಬೈಕ್‍ಗಳು 19,ಕಮಾಂಡ್ ಕಂಟ್ರೋಲ್ ವಾಹನ 01,ಹೈವೇ ಪೆಟ್ರೋಲಿಂಗ್ ವಾಹನ 02, ಇಂಟರ್‍ಸೆಪ್ಟರ್ 06 ಗಳನ್ನು ನಿಯೋಜಿಸಲಾಗಿದೆ.

ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗಾಗಿ ಮಹಿಳಾ ಅಧಿಕಾರಿ ಸಿಬ್ಬಂದಿಗಳುಳ್ಳ ಚಾಮುಂಡಿ ಪಡೆ ಗಸ್ತು ವಾಹನಗಳನ್ನು ನಿಯೋಜಿಸಲಾಗಿರುತ್ತದೆ. ಚಾಮುಂಡಿ ಬೆಟ್ಟಕ್ಕೆ 31-12-2018 ರ ರಾತ್ರಿ 9 ಗಂಟೆಯಿಂದ 01-01-2019 ರ ಬೆಳಿಗ್ಗೆ 5.30 ರವರೆಗೆ ಚಾಮುಂಡಿ ಬೆಟ್ಟದ ನಿವಾಸಿಗಳನ್ನು ಹೊರತುಪಡಿಸಿ ಚಾಮುಂಡಿ ಬೆಟ್ಟಕ್ಕೆ ತೆರಳುವ ಎಲ್ಲಾ ಖಾಸಗಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಆದರೆ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳ ವ್ಯವಸ್ಥೆ ಇರುತ್ತದೆ. ವರ್ಷಾಚರಣೆಗೆ ತೆರಳುವ ಮುನ್ನಾ ಬೆಲೆಬಾಳುವ ವಸ್ತುಗಳು / ಹೆಚ್ಚಿನ ಒಡವೆಗಳನ್ನು ಕೊಂಡೊಯ್ಯಬೇಡಿ ಸೇರಿದಂತೆ ಹಲವು ಸೂಚನೆಗಳನ್ನು ಪಾಲಿಸುವಂತೆ ತಿಳಿಸಿದ್ದಾರೆ

ಯಾವುದೇ ರೀತಿಯ ಅಹಿತಕರ ಘಟನೆಗಳು ಆಗದಂತೆ 2019 ನೇ ವರ್ಷವನ್ನು ಸ್ವಾಗತಿಸಲುಪೊಲೀಸರು ನೀಡಿರುವ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಪೊಲೀಸರೊಂದಿಗೆ ಸಹಕರಿಸಬೇಕೆಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

 

 

Leave a Reply

comments

Related Articles

error: