ಪ್ರಮುಖ ಸುದ್ದಿ

ದೇವಸ್ಥಾನ ಗೋಡೆಯ ಮೆಸ್ ಮುರಿದು ಹುಂಡಿ ಹಣ ಕಳವು

ರಾಜ್ಯ(ದೊಡ್ಡಬಳ್ಳಾಪುರ)ಡಿ.29:- ದೇವಸ್ಥಾನ ಗೋಡೆಗೆ ಹಾಕಿದ್ದ ಮೆಸ್ ಮುರಿದು ಹುಂಡಿ ಹಣ ದೋಚಿರುವ ಘಟನೆ ದೊಡ್ಡಬಳ್ಳಾಪುರ ಸೋಮೇಶ್ವರ ಬಡಾವಣೆಯಲ್ಲಿ ನಡೆದಿದೆ.

ಜ್ಯೋರ್ತಿಲಿಂಗೆಶ್ವರ ಸ್ವಾಮಿ ದೇವಾಲಯದ ಹೊರಭಾಗದಲ್ಲಿ ಕಬ್ಬಿಣದ ಮೆಸ್ ಅಳವಡಿಸಲಾಗಿತ್ತು. ಕಬ್ಬಿಣದ ಮೆಸ್ ಮುರಿದು ದೇವಸ್ಥಾನ ಒಳ ಹೊಕ್ಕ ಕಳ್ಳರು ಹುಂಡಿ ಒಡೆದು ಹಣದೊಂದಿಗೆ ಪರಾರಿಯಾಗಿದ್ದಾರೆ.

ರಾತ್ರಿ ವೇಳೆ ಕಳ್ಳತನ ಕೃತ್ಯ ನಡೆದಿದ್ದು. ದೇವಸ್ಥಾನದ ಸುತ್ತಮುತ್ತಲಿನ ನಿವಾಸಿಗಳ ಗಮನಕ್ಕೆ ಬರದ ರೀತಿಯಲ್ಲಿ ಕಳ್ಳರು ಕೃತ್ಯ ಎಸಗಿದ್ದಾರೆ.  ದೇವಸ್ಥಾನದಲ್ಲಿ ಕೆಲವು ದಿನಗಳ ಹಿಂದೆ ವಿಶೇಷ ಪೂಜೆ ನಡೆದಿದ್ದು. ಭಾರೀ ಸಂಖ್ಯೆಯಲ್ಲಿ ಸೇರಿದ ಭಕ್ತರು ಉದಾರವಾಗಿಯೇ ದೇವರಿಗೆ ಕಾಣಿಕೆ ಸಲ್ಲಿಸಿದ್ದರು. ಇದರ ಸುಳಿವು ಗೊತ್ತಿದವರೇ ಕೃತ್ಯ ನಡೆಸಿದ್ದಾರೆ ಎನ್ನುವುದು ಸ್ಥಳೀಯರ ಆರೋಪ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: