ಮೈಸೂರು

ಮೈಸೂರು ಅಥ್ಲೆಟಿಕ್ಸ್ ಕ್ಲಬ್ ಗೆ ಅಧ್ಯಕ್ಷರಾಗಿ ವಾಸು

ಮೈಸೂರು,ಡಿ.29 : ಮೈಸೂರು ಅಥ್ಲೆಟಿಕ್ಸ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಮಾಜಿ ಶಾಸಕ ವಾಸು ಅವರು ಹಾಗೂ ಕಾರ್ಯದರ್ಶಿಯಾಗಿ ಎಂ.ಯೋಗೇಂದ್ರ ಅವರನ್ನು ಆಯ್ಕೆಗೊಳಿಸಲಾಗಿದೆ.

ಈಚೆಗೆ ನಡೆದ 2018-19ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯಲ್ಲಿ ಉಪಾಧ್ಯಕ್ಷರಾಗಿ ಡಾ.ಸಿ.ಕೃಷ್ಣ, ಮುಖ್ಯ ಸಂಯೋಜನಾಧಿಕಾರಿಯಾಗಿ ಸಿ.ಕೆ.ಮುರಳೀಧರ್, ಸಂಘಟನಾ ಕಾರ್ಯದರ್ಶಿಯಾಗಿ ಜಿ.ಆರ್.ಪ್ರಭಾಕರ್, ಖಜಾಂಚಿಯಾಗಿ ಕೆ.ಗುರುರಾಜ್, ಜಂಟಿ ಕಾರ್ಯದರ್ಶಿಯಾಗಿ ಮಹದೇವಯ್ಯ, ಕೆ.ಗೋಪಿನಾಥ್ ಮತ್ತು ಹೆಚ್.ಆರ್.ರಾಮಸ್ವಾಮಿ, ಜಂಟಿ ಸಂಘಟನಾ ಕಾರ್ಯದರ್ಶಿಯಾಗಿ ಬಿ.ಕೆ.ರಾಜೇ ಅರಸ್, ಎನ್.ಕೆ.ಸುಂದರ್ ಮತ್ತಿತರರು ಆಯ್ಕೆಯಾಗಿದ್ದಾರೆ ಎಂದು ಕಾರ್ಯದರ್ಶಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: