ಪ್ರಮುಖ ಸುದ್ದಿ

ಜೋಡುಪಾಲದಲ್ಲಿ ಟಿಟಿ ವಾಹನ ಅಗ್ನಿಗಾಹುತಿ

ರಾಜ್ಯ(ಮಡಿಕೇರಿ) ಡಿ.29 :- ತಾಂತ್ರಿಕ ಕಾರಣಗಳಿಂದ ಟಿಟಿ ವಾಹನವೊಂದು ಅಗ್ನಿಗಾಹುತಿಯಾದ ಘಟನೆ ಜೋಡುಪಾಲ ಸಮೀಪ ನಡೆದಿದೆ.

ಕಾಸರಗೋಡಿನಿಂದ ಮಡಿಕೇರಿಗೆ ಪ್ರವಾಸಕ್ಕೆಂದು ಬರುತ್ತಿದ್ದ (ಕೆಎಲ್27-ಬಿ2621) ವಾಹನದಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆ ಆತಂಕಗೊಂಡ ವ್ಯಾನ್‍ನಲ್ಲಿದ್ದ 15 ಮಂದಿ ಪ್ರವಾಸಿಗರು ಕೆಳಕ್ಕಿಳಿದಿದ್ದಾರೆ.

ಚಾಲನ ಬಾನೆಟ್ ಎತ್ತುತ್ತಿದ್ದಂತೆ ಅಗ್ನಿ ಕಾಣಿಸಿಕೊಂಡು ವಾಹನವನ್ನು ಸಂಪೂರ್ಣ ವ್ಯಾಪಿಸಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.ಚಾಲಕ ಮೊಹಮ್ಮದ್ ನೀಡಿರುವ ಮಾಹಿತಿಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: