ಪ್ರಮುಖ ಸುದ್ದಿ

ಇಬ್ಬರಿಗೆ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಪರಾರಿ

ರಾಜ್ಯ(ಹುಬ್ಬಳ್ಳಿ)ಡಿ.31:- ಯಾರೋ ದುಷ್ಕರ್ಮಿಗಳು ನಿನ್ನೆ ತಡ ರಾತ್ರಿ ಇಬ್ಬರಿಗೆ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣದಲ್ಲಿ ನಡೆದಿದೆ.

ನಿನ್ನೆ ತಡರಾತ್ರಿ ಬಸ್ ನಿಲ್ದಾಣದಲ್ಲಿ ಇಬ್ಬರಿಗೆ ಚಾಕು ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹೊಟ್ಟೆ ಹಾಗೂ ಎದೆ ಭಾಗಕ್ಕೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ. ಆನಂದ್ ಎಡ್ರಾವಿ ಹಾಗೂ ನಿಲೇಶ್ ಮೇಟಿ ಚಾಕು ಇರಿತಕ್ಕೊಳಗಾದವರು. ಇಬ್ಬರೂ ನಗರದ ವೀರಾಪೂರ ಬಡಾವಣೆಯ ನಿವಾಸಿಗಳಾಗಿದ್ದು, ಇದೀಗ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಓರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಪೊಲೀಸರು ಚಾಕು ಇರಿತಕ್ಕೆ ಕಾರಣವೇನು ಎಂದು ಮಾಹಿತಿ   ಕಲೆ ಹಾಕುತ್ತಿದ್ದಾರೆ. ಉಪನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪರಾರಿಯಾದ ದುಷ್ಕರ್ಮಿಗಳಿಗಾಗಿ ಜಾಲ ಬೀಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: