ಪ್ರಮುಖ ಸುದ್ದಿಮೈಸೂರು

ಭೀಮಾ -ಕೊರೆಗಾಂವ್ ಯುದ್ಧದ 201ನೇ ವರ್ಷದ ವಿಜಯೋತ್ಸವ : ವಿಜಯ ಸ್ಥಂಭದ ವಾರ್ಷಿಕೋತ್ಸವ ನಾಳೆ

ಮೈಸೂರು, ಡಿ.31 : ನಗರದ ಅಶೋಕಪುರಂ ಜೈಭೀಮ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ  ನಾಳೆ (ಜ.1) ಸಂಜೆ 6.30ಕ್ಕೆ ಜಯನಗರ ರೇಲ್ವೆ ಗೇಟ್ ಬಳಿಯ ಪಾಲಿಕೆ ವಲಯ ಕಚೇರಿ ಎರಡರ ಬಳಿ ಭೀಮಾ- ಕೊರೆಗಾಂವ್ ಯುದ್ಧದ 201 ನೇ ವರ್ಷದ ವಿಜಯೋತ್ಸವ ದಿನಾಚರಣೆ ವಿಜಯ ಸ್ಥಂಭದ ಮೊದಲನೇ ವಾರ್ಷಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಜಯರಾಜ್ ಹೆಗಡೆ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿವೃತ್ತ ನ್ಯಾಯಾಧೀಶ ಎಚ್.ಎನ್. ನಾಗಮೋಹನದಾಸ್ ಉದ್ಘಾಟಿಸುವರು, ಜ್ಞಾನಪ್ರಕಾಶ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು, ಬುದ್ಧ ಪ್ರಕಾಶ ಬಂತೇಜಿ ಸಮ್ಮುಖ ವಹಿಸಲಿದ್ದು, ಡಾ.ಸಿ.ಎಸ್. ದ್ವಾರಕನಾಥ್ ಮುಖ್ಯ ಭಾಷಣ ಮಾಡುವರು. ಪುರುಷೋತ್ತಮ್, ಎಚ್. ಜನಾರ್ಧನ್, ಎಸ್. ಉಮೇಶ್ ಹಾಜರಿರುವರು.

ಸಿದ್ಧಸ್ವಾಮಿ, ನಾಗಸಿದ್ಧಾರ್ಥ ಹೊಲೆಯಾರ್, ಸಿದ್ದರಾಜು, ಈಶ್ವರ್ ಚಕ್ಕಡಿ, ಕೆ.ಆರ್. ಗೋಪಾಲಕೃಷ್ಣ ಅವರನ್ನು ಸನ್ಮಾನಿಸಲಾಗುವುದು.

ಇದೇ ವೇಳೆ, ಅಂಬೇಡ್ಕರ್, ಮೊದಲಾದವರ ಚಿತ್ರವುಳ್ಳ ಒಂದು ಸ್ತಬ್ಧಚಿತ್ರ ಸಹಾ ಸಂಜೆ 4.30ಕ್ಕೆ ಅಂಬೇಡ್ಕರ್ ಉದ್ಯಾನದಿಂದ ಹೊರಟು ಪ್ರಮುಖ ಮುಖ್ಯ ರಸ್ತೆಗಳಲ್ಲಿ ಸಾಗಿ ಪುರಭವನ ತಲುಪಲಿದೆ ಎಂದು ತಿಳಿಸಿದರು.

ದಿಲೀಪ್, ರವಿಕುಮಾರ್, ಚಿಕ್ಕಜವರಯ್ಯ, ಇತರರು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: