ಸುದ್ದಿ ಸಂಕ್ಷಿಪ್ತ

ಮರಿಮಲ್ಲಪ್ಪ ಕಾಲೇಜಿನ ಸಾಂಸ್ಕೃತಿಕ ಸಮಾರಂಭ.2.

ಮೈಸೂರು,ಡಿ.31 : ಮರಿಮಲ್ಲಪ್ಪ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ಹಾಗೂ ಕ್ರೀಡಾ ವೇದಿಕೆಯ ಸಮಾರೋಪವನ್ನು ಜ.2ರ ಬೆಳಗ್ಗೆ 9 ಗಂಟೆಗೆ ಕಲಾಮಂದಿರದಲ್ಲಿ ಏರ್ಪಡಿಸಲಾಗಿದೆ.

ಸಂಸ್ಥೆಯ ಗೌರವಾಧ್ಯಕ್ಷ ಎಸ್.ಪರಮಶಿವಯ್ಯ ಅಧ್ಯಕ್ಷತೆ. ರಾಮಕೃಷ್ಣಾಶ್ರಮದ ಅಧ್ಯಕ್ಷ ಆತ್ಮಾಜ್ಞಾನಂದಾಜಿ ಅವರಿಂದ ಸಮಾರೋಪ ಭಾಷಣ, ಗೌರವ ಕಾರ್ಯದರ್ಶಿ ಪ್ರೊ.ಕೆ.ಎನ್.ಪಂಚಾಕ್ಷರಸ್ವಾಮಿಯವರು ಬಹುಮಾನ ವಿತರಿಸುವರು. ಮುಖ್ಯ ಅತಿಥಿಯಾಗಿ ಪ.ಪೂಶಿ ಇಲಾಖೆ ಉಪನಿರ್ದೇಶಕ ಡಾ.ದಯಾನಂದ ಇರಲಿದ್ದಾರೆ, ಪ್ರಾಚಾರ್ಯರಾದ ಬಿ.ಆರ್.ನೀಲಕಂಠ, ಉಪಪ್ರಾಚಾರ್ಯರಾದ ಎಂ.ಎಸ್.ವಿಜಯ, ಶೈಕ್ಷಣಿಕ ಅಧಿಕಾರಿ ಮಂಗಳ ಮುದ್ದುಮಾದಪ್ಪ ಹಾಜರಿರುವರು. (ಕೆ.ಎಂ.ಆರ್)

Leave a Reply

comments

Related Articles

error: