ಪ್ರಮುಖ ಸುದ್ದಿ

ಮಹಾನ್ ಚಿತ್ರ ನಿರ್ಮಾಪಕ ಮೃಣಾಲ್ ಸೇನ್ ನಿಧನ

ದೇಶ(ನವದೆಹಲಿ)ಡಿ.31:- ತನ್ನ ಚಿತ್ರಗಳಿಂದಲೇ ಸಮಾಜಕ್ಕೆ ಕನ್ನಡಿ ಹಿಡಿದ ಬಾಲಿವುಡ್ ಗೆ ಮಿಥುನ್ ಚಕ್ರವರ್ತಿಯಂತಹ ನಟನನ್ನು ಪರಿಚಯಿಸಿದ ಬಾಲಿವುಡ್ ಮಹಾನ್ ಚಿತ್ರ ನಿರ್ಮಾಪಕ ಮೃಣಾಲ್ ಸೇನ್ ನಿಧನ ಹೊಂದಿದ್ದಾರೆ.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ 95ವರ್ಷ ವಯಸ್ಸಾಗಿತ್ತು. ‘ನೀಲ್ ಆಕಾಶೇರ್ ನೀಚೆ’ ಭುವನ ಶೋಮ್, ಏಕ್ ದಿನ ಅಚಾನಕ್, ಪದಾತಿಕ, ಮೃಗಯಾ ದಂತಹ ಚಿತ್ರಗಳನ್ನು ನಿರ್ಮಿಸಿದ್ದರು. ಅವರ ಕುಟುಂಬದ ಸದಸ್ಯರೋರ್ವರು ಅವರ ನಿಧನದ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿದ್ದಾರೆ ಎನ್ನಲಾಗಿದೆ. ಹಲವು ರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟರ್ ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃಣಾಲ್ ಸೇನ್ ಅವರ ನಿಧನದಿಂದ ದುಃಖವಾಗಿದೆ. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದಿದ್ದಾರೆ. ಸೀತಾರಾಂ ಯೆಚೂರಿ ಕೂಡ ಸಂತಾಪ ವ್ಯಕ್ತಪಡಿಸಿದ್ದು ಕೇವಲ ಚಿತ್ರರಂಗವಲ್ಲ. ಜಗತ್ತಿನ ಸಂಸ್ಕೃತಿ ಮತ್ತು ಭಾರತದ ಸಭ್ಯತೆ ಮೌಲ್ಯ ಮಾತ್ರವಲ್ಲ. ಮಾನವತಾವಾದದ ಕಥೆಗಳ ಮೂಲಕ ಸಮಾಜದಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದಿದ್ದರು ಎಂದಿದ್ದಾರೆ. (ಎಸ್.ಎಚ್)

Leave a Reply

comments

Related Articles

error: