
ಪ್ರಮುಖ ಸುದ್ದಿಮೈಸೂರು
ಜ.2ರವರೆಗೆ ಪುಣ್ಯಾನಂದಪುರಿ ಶ್ರೀಗಳ ಜಿಲ್ಲಾ ಪ್ರವಾಸ
ಮೈಸೂರು, ಡಿ.31 : ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಮಠದಲ್ಲಿ ಫೆ.9 ಮತ್ತು 10ರಂದು ನಡೆಯುವ ವಾಲ್ಮೀಕಿ ಜಾತ್ರೆ ಪ್ರಯುಕ್ತ ಪುಣ್ಯಾನಂದಪುರಿ ಸ್ವಾಮೀಜಿ ಇಂದಿನಿಂದ ಜ.2ರ ವರೆಗೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ ಎಂದು ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ದ್ಯಾವಪ್ಪ ನಾಯಕ ತಿಳಿಸಿದರು.
ಇಂದು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಕೆ.ಆರ್.ನಗರ ತಾಲ್ಲೂಕುಗಳಿಗೆ ಭೇಟಿ ನೀಡುವರು. ನಾಳೆ ಜ.1ರಂದು ಎಚ್.ಡಿ.ಕೋಟೆ, ಗುಂಡ್ಲುಪೇಟೆ, ಚಾಮರಾಜನಗರ, ಮೈಸೂರು ತಾಲ್ಲೂಕು ಮತ್ತು ಜ.2ರಂದು ನಂಜನಗೂಡು, ಯಳಂದೂರು, ಕೊಳ್ಳೇಗಾಲ ತಾಲ್ಲೂಕುಗಳಿಗೆ ಭೇಟಿ ನೀಡಲಿದ್ದಾರೆ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶ್ರೀಗಳು ಬರುವ ಸಮಯದಲ್ಲಿ ಸಮಾಜದ ಮುಖಂಡರು, ಸಮುದಾಯದವರು ಹಾಜರಿದ್ದು ಸ್ವಾಗತ ಕೋರಬೇಕೆಂದು ಮನವಿ ಮಾಡಿದರು.
ಪದಾಧಿಕಾರಿಗಳಾದ ಪ್ರಭಾಕರ್ ಹುಣಸೂರು, ವೆಂಕಟೇಶ್ ಡಿ.ನಾಯಕ್, ಎಚ್.ಆರ್.ಪ್ರಕಾಶ್, ರಘು ಯಡಕೊಳ, ಮೂಗುರು ಕುಮಾರ್, ಮಯೂರ ಸುದ್ದಿಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)