ದೇಶಪ್ರಮುಖ ಸುದ್ದಿ

ರೈಲ್ವೇಯಲ್ಲಿ ಜಾಹೀರಾತು: ಹಣದ ಬದಲು ಅಗತ್ಯ ವಸ್ತುಗಳನ್ನು ನೀಡಲಿರುವ ಕಂಪನಿಗಳು!

ನವದೆಹಲಿ (ಡಿ.31): ದೇಶದಲ್ಲಿಯೇ ಅತಿದೊಡ್ಡ ಸಾರಿಗೆ ಜಾಲ ಹೊಂದಿರುವ‌ ರೈಲ್ವೆ ಇಲಾಖೆ, ಇದೀಗ ಹೊಸ ಜಾಹೀರಾತು ನೀತಿ ಜಾರಿಗೊಳಿಸಲು ಸಿದ್ಧತೆ ಮಾಡಿಕೊಂಡಿದೆ. ನೂತನ ಜಾಹೀರಾತು ನೀತಿಯಲ್ಲಿ, ಇಲಾಖೆಗೆ ಯಾವುದೇ ಹಣ ಬರುವುದಿಲ್ಲ.‌ ಬದಲಿಗೆ ಬೋಗಿಯಲ್ಲಿ ಅಗತ್ಯವಿರುವ ವಸ್ತುಗಳನ್ನು ಕಂಪನಿಗಳು ನೀಡಿದರೆ‌ ಸಾಕೆಂದು ಮಂಡಳಿ ಹೇಳಿದ್ದು, ಇದೊಂದು ರೀತಿ ಪ್ರಾಚೀನ ಕಾಲದ ಬಾರ್ಟರ್ ಪದ್ಧತಿ‌ ಎನ್ನಬಹುದಾಗಿದೆ.

ರೈಲ್ವೇ ಬೋಗಿಯ ಶೌಚಾಲಯ ಹಾಗೂ ಬಾಗಿಲಿನ ಬಳಿ ಜಾಹೀರಾತಿಗೆ ಅವಕಾಶ ನೀಡಲು ಒಪ್ಪಿಗೆ ನೀಡಿದ್ದು, ಇದಕ್ಕೆ ಬದಲಿಗೆ ಕಂಪನಿಗಳು ಬೋಗಿಯಲ್ಲಿ ಪ್ರಯಾಣಕರಿಗೆ ನೀಡಲು ಅಗತ್ಯವಿರುವ ಸೋಪು, ಬೆಡ್ ರೋಲ್‌ನಂತ ವಸ್ತುಗಳನ್ನು ನೀಡಬೇಕು ಎಂದು ಮಂಡಳಿಯ ಅಧಿಕಾರಿಗಳು ಹೇಳಿದ್ದಾರೆ.

ಈಗಾಗಲೇ ಕೆಲ ದಿನಗಳಿಂದ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಯಲ್ಲಿದ್ದು, ಯಶ ಕಂಡರೆ ದೇಶಾದ್ಯಂತ ವಿಸ್ತರಿಸಲು ಸಿದ್ಧತೆ ನಡೆಸಲಾಗಿದೆ. ಪ್ರತಿನಿತ್ಯ ರೈಲಿನಲ್ಲಿ ಸಾವಿರಾರು ಮಂದಿ ಪ್ರಯಾಣಿಕರು ಓಡಾಡುತ್ತಾರೆ.‌ ಇದರಿಂದ ಜಾಹೀರಾತು ಸಂಸ್ಥೆಗಳಿಗೂ ಉತ್ತಮ ಪ್ರಚಾರ ಸಿಗಲಿದೆ ಎಂದಿದ್ದಾರೆ.(ಎನ್.ಬಿ)

Leave a Reply

comments

Related Articles

error: