ಪ್ರಮುಖ ಸುದ್ದಿಮೈಸೂರು

ಭದ್ರತೆ ಲೆಕ್ಕಿಸದೆ ಕೆಆರ್‌ಎಸ್‌ ಹಿನ್ನೀರಿನಲ್ಲಿ ಮೋಜು ಮಸ್ತಿ : ಮೈಸೂರಿನ ಉದ್ಯಮಿ ಮೇಲೆ ಎಫ್‍ಐಆರ್

ರಾಜ್ಯ(ಮಂಡ್ಯ),ಜ.1:- ಭದ್ರತೆ ಲೆಕ್ಕಿಸದೆ ಕೆಆರ್‌ಎಸ್‌ ಹಿನ್ನೀರಿನಲ್ಲಿ ಮೋಜು ಮಸ್ತಿ ಮಾಡಿದ ಮೈಸೂರಿನ ಉದ್ಯಮಿ ಮೇಲೆ ಪ್ರಕರಣ ದಾಖಲಾಗಿದೆ.

ವಿಕ್ರಂ ಗುಪ್ತಾ ಮೈಸೂರಿನ ಉದ್ಯಮಿಯಾಗಿದ್ದು, ಕೆ.ಆರ್.ಎಸ್ ಹಿನ್ನೀರಿನ ಅಣೆಕಟ್ಟೆ ನೀರಿನೊಳಗೆ ಬೇಕಾಬಿಟ್ಟಿಯಾಗಿ ಕಾರು ಚಾಲನೆ ಮಾಡಿದ್ದಾರೆ. ಈ ಬಗ್ಗೆ ಕೆಆರ್‌ಎಸ್‌ ಇಂಜನೀಯರ್ ತಮ್ಮೇಗೌಡ ಅವರು ಕೆಆರ್‌ಎಸ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ಪೊಲೀಸರು ದೂರು ದಾಖಲಿಸಿಕೊಂಡು ಉದ್ಯಮಿ ವಿಕ್ರಂ ಗುಪ್ತಾ ವಿರುದ್ಧ ಇಂಡಿಯನ್ ಮೋಟಾರ್ ವೆಹಿಕಲ್ ಆ್ಯಕ್ಟ್ ಐಪಿಸಿ ಸೆಕ್ಷನ್ 1860ರಡಿ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಕೆಆರ್‌ಎಸ್‌ ಹಿನ್ನೀರಿನಲ್ಲಿ ಬೇಕಾಬಿಟ್ಟಿಯಾಗಿ ಕಾರು ಚಾಲನೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಕೆಆರ್‌ಎಸ್‌ ಡ್ಯಾಂನ ಹಿನ್ನೀರಿನಲ್ಲಿ ಉದ್ಯಮಿ ವಿಕ್ರಂ ಗುಪ್ತಾ ತಮ್ಮ ಪುಂಡಾಟ ಮೆರೆದಿದ್ದರು. ಭದ್ರತೆ ಲೆಕ್ಕಿಸದೆ ವಿಕ್ರಂ ಅಣೆಕಟ್ಟಿನ ನೀರಲ್ಲಿ ಬೇಕಾಬಿಟ್ಟಿಯಾಗಿ ಕಾರು ಚಾಲನೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಕ್ರಂ ಮೈಸೂರಿನ ಉದ್ಯಮಿಯಾಗಿದ್ದು, ಕೆಆರ್‌ಎಸ್‌ನಲ್ಲೂ ಸ್ವಂತ ಮನೆ ಹೊಂದಿದ್ದಾರೆ. ಕೆಆರ್‌ಎಸ್‌ ಹಿನ್ನೀರಿನಲ್ಲಿ ತನ್ನ ಎಸ್‍ಯುವಿ ವೆಹಿಕಲ್‍ನಲ್ಲಿ ಮೋಜು ಮಸ್ತಿ ಮಾಡಿದ್ದರು. ಇವರ ರೇಸಿಂಗ್ ಅವತಾರ ನೋಡಿಯೂ ಡ್ಯಾಂನಲ್ಲಿ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿ ಕೂಡ ಸೈಲೆಂಟ್ ಆಗಿದ್ದರು.

ಪ್ರಕರಣ ಕುರಿತು  ಕಾವೇರಿ ನೀರಾವರಿ ನಿಗಮ ಎಇ ಬಸವರಾಜೇಗೌಡ ಅವರು ಮಾತನಾಡಿ, “ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ನಾನು 2 ದಿನ ಕೋಲ್ಕತ್ತಾಗೆ ಕೆಲಸಕ್ಕೆಂದು ಹೋಗಿ ಭಾನುವಾರ ಬೆಳಿಗ್ಗೆ ಬಂದೆ. ಹಿನ್ನೀರಿನ ಸಮೀಪ ಬರಲು ಸಾಕಷ್ಟು ರಸ್ತೆಗಳು ಇರುವ ಕಾರಣ ಜನರು ಬರುತ್ತಾರೆ. ಈ ರೀತಿ ಮಾಡುವವರ ವಿರುದ್ಧ ತನಿಖೆ ನಡೆಸಿ ಕ್ರಮಕೈಗೊಳ್ಳುತ್ತೇವೆ. ಸಿಸಿಟಿವಿ ಕ್ಯಾಮೆರಾದಲ್ಲಿ ಈ ಘಟನೆ ಬಗ್ಗೆ ವೀಕ್ಷಿಸಿ ನಾವು ಆ ವ್ಯಕ್ತಿ ವಿರುದ್ಧ ಕ್ರಮಗೈಕೊಳ್ಳುತ್ತೇನೆ” ಎಂದು ಹೇಳಿದ್ದರು. ಇದೀಗ ಉದ್ಯಮಿಯ ಮೇಲೆಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: