ಮೈಸೂರು

‘ನಿರೀಕ್ಷೆ’ ವಿಶೇಷ ಮಕ್ಕಳ ಶಾಲೆಯಲ್ಲಿ ನಟ ಉಪೇಂದ್ರ ಹುಟ್ಟುಹಬ್ಬ ಆಚರಣೆ

ನಟ ಉಪೇಂದ್ರ ಅವರು ತಮ್ಮ ಹುಟ್ಟುಹಬ್ಬವನ್ನು  ಸೆ.18 ರ  ಬೆ.11 ಗಂಟೆಗೆ ನಿರೀಕ್ಷೆ ವಿಶೇಷ ಮಕ್ಕಳ ಶಾಲೆಯಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಇವರು ಕಳೆದ ಎರಡು ವರ್ಷಗಳಿಂದ ಪ್ರತಿವರ್ಷವೂ ನಿರೀಕ್ಷೆ ಶಾಲೆಯ 10 ಅತಿಬಡ ಕುಟುಂಬದ ವಿಕಲಚೇತನ ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ಶೈಕ್ಷಣಿಕ ಅಭಿವೃದ್ಧಿಗೆ ಸಹಾಯ ಮಾಡುತ್ತಿದ್ದಾರೆ. ಆದ್ದರಿಂದ  ಅವರ ಹುಟ್ಟುಹಬ್ಬದ ಪ್ರಯುಕ್ತ ರಾಮಕೃಷ್ಣನಗರದಲ್ಲಿನ ಕೆನರಾ ಬ್ಯಾಂಕ್ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈಗಾಗಲೇ ನಿರೀಕ್ಷೆ ವಿಶೇಷ ಮಕ್ಕಳು ‘ನನ್ನ ಗಿಡ ನನ್ನ ಭೂಮಿ’ ಎಂಬ ‘ಹಸಿರು ಅಭಿಯಾನ’ದ ಅಂಗವಾಗಿ ಮಕ್ಕಳೇ ಸ್ವತಃ ತಯಾರಿಸಿದ್ದ 11,600 ಸಸಿಗಳನ್ನು ಮುಖ್ಯವಾಹಿನಿ ಶಾಲೆಗಳಿಗೆ ಮತ್ತು ಅನೇಕ ಸಂಘ ಸಂಸ್ಥೆಗಳಿಗೆ ಉಚಿತವಾಗಿ ವಿತರಿಸಿರುತ್ತಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪೊಲೀಸ್ ಸೂಪರಿಂಟೆಂಡೆಂಟ್ ರವಿ.ಡಿ.ಚೆಂದನ್ನವರ್ ಆಗಮಿಸಲಿದ್ದಾರೆ. ಅಲ್ಲದೇ ಎಸ್.ಜೆ.ಸಿ.ಇ ವಿದ್ಯಾರ್ಥಿಗಳ ‘ರಷ್’ ತಂಡ ಕೂಡ ಭಾಗವಹಿಸಲಿದೆ. ಮಿಸ್ ಇಂಡಿಯಾ ಎಲಿಗೆಂಟ್ ನ ವಿಜೇತೆ ಹಾಗೂ ಎನ್ವಿರೋ ಫ್ಯಾಷನ್ ವರ್ಲ್ಡ್ ನ ಮಾಲೀಕರಾದ ಶಿಲ್ಪ ಇರ್ದಾಲ್ ಭಾಗವಹಿಸಲಿದ್ಧಾರೆ.

Leave a Reply

comments

Related Articles

error: