ದೇಶಮೈಸೂರು

ಕಳಪೆ ಆಹಾರ ವಿಡಿಯೋ ಪ್ರಕರಣ : ತೇಜ್‍ ಬಹದ್ದೂರ್‍ ಇನ್ನು ಪ್ಲಂಬರ್

ಗಡಿ ಕಾಯುವ ಯೋಧರಿಗೆ ನೀಡುವ ಆಹಾರವು ಕಳಪೆಗುಣಮಟ್ಟದಿಂದ ಕೂಡಿದೆ ಎಂದು  ತಮ್ಮ ಅಳಲನ್ನು ಸಾಮಾಜಿಕ ಜಾಲತಾಣವಾದ ಫೇಸ್‍ಬುಕ್‍ನಲ್ಲಿ ತೋಡಿಕೊಂಡಿದ್ದ  ಯೋಧ ತೇಜ್ ಬಹದ್ದೂರ್ ಯಾದವ್ ಅವರನ್ನು ವರ್ಗಾವಣೆ ಮಾಡಿ ಪ್ಲಂಬರ್ ಕೆಲಸಕ್ಕೆ ನಿಯೋಜಿಸಲಾಗಿದೆ.

ತೇಜ್‍ ಬಹದ್ದೂರ್ ಯಾದವ್ (29) 29ನೇ ಬೆಟಾಲಿಯನ್ ಸಶಸ್ತ್ರ ಸೀಮಾದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ  ವಿಡಿಯೋ ದೇಶದಾದ್ಯಂತ ವೈರಲ್‍ ಆಗಿ  ಯೋಧರ ನಿರ್ಲಕ್ಷ್ಯಿಸಲಾಗುತ್ತಿದೆ ಎಂಬ ಖಂಡನೆ ಸಾರ್ವಜನಿಕರಿಂದ ವ್ಯಕ್ತವಾಗಿತ್ತು.

ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಈ ಬಗ್ಗೆ ಅಧಿಕಾರಿಗಳಿಂದ ಸ್ಪಷ್ಟನೆ ಪಡೆದಿದ್ದಾರೆ. ಬಿ.ಎಸ್‍ಎಫ್ ಅಧಿಕಾರಿಗಳು ಈತನ ಆರೋಪವನ್ನು ನಿರಾಕರಿಸಿದ್ದಾರೆ.  ಈತ ಮದ್ಯವ್ಯಸನಿಯಾಗಿದ್ದು ಸೇನೆಗೆ ಸೇರಿದಾಗಿನಿಂದಲೂ ಕೌನ್ಸಿಲಿಂಗ್ ಮಾಡಲಾಗುತ್ತಿದೆ, ಅಲ್ಲದೇ ಪೂರ್ವಾನುಮತಿಯಿಲ್ಲದೆ ಸೇವೆಗೂ ಗೈರು ಹಾಜರಾಗಿದ್ದಾನೆ ಹಾಗೂ ಹಿರಿಯ ಅಧಿಕಾರಿಗಳೊಂದಿಗೂ ಅಸಭ್ಯವಾಗಿ ವರ್ತಿಸುತ್ತಿದ್ದಾನೆಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

Leave a Reply

comments

Related Articles

error: