ಮೈಸೂರು

ಹೊಸವರ್ಷದ ಪಾರ್ಟಿಗೆಂದು ಸ್ನೇಹಿತನ ಮನೆಗೆ ಬಂದಿದ್ದ ಇಬ್ಬರು ಯುವಕರು ನೀರು ಪಾಲು

ಮೈಸೂರು,ಜ.1:- ಹೊಸವರ್ಷದ ಪಾರ್ಟಿ ಮಾಡಲು ಸ್ನೇಹಿತನ ಮನೆಗೆ ಬಂದಿದ್ದ  ಇಬ್ಬರು ಯುವಕರು ಕಪಿಲಾನದಿಯಲ್ಲಿ ಕಾಲುಜಾರಿ ಬಿದ್ದು ನೀರು ಪಾಲಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

ನಂಜನಗೂಡಿನ ಹೆಜ್ಜಿಗೆ ಸೇತುವೆ ಬಳಿ‌ ಯುವಕರು ನೀರು ಪಾಲಾಗಿದ್ದಾರೆ. ಸ್ನೇಹ ಶ್ರೇಯಸ್, ರಂಜಿತ್ ರಾಜೀವ್ ತಿವಾರಿ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಹೊಸ ವರ್ಷದ ಪಾರ್ಟಿ ಮಾಡಲು ಬೆಂಗಳೂರಿನಿಂದ ಯುವಕರು ಚಾಮಾಲಪುರಹುಂಡಿ ನಿವಾಸಿಯ ಸ್ನೇಹಿತ ವಿನೋದ್ ಮನೆಗೆ ಆಗಮಿಸಿದ್ದರು. ಈ ನಡುವೆ ಕಪಿಲಾ ನದಿಯ ದಡದಲ್ಲಿ ಇದ್ದಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಸ್ವತಃ ಬದುಕುಳಿದಿರುವ  ಸ್ನೇಹಿತ  ವಿನೋದ್ ಮಾಹಿತಿ ನೀಡಿದ್ದು,  ನದಿಯಲ್ಲಿ ಕಾಲುಜಾರಿ ಬಿದ್ದು ತನ್ನ ಸ್ನೇಹಿತರು ನೀರು ಪಾಲಾದರು. ನಾನು ಸಹ ಕಾಲು ಜಾರಿ ಬಿದ್ದಿದ್ದೆ ನಾನು ಹೇಗೋ ಬದುಕುಳಿದೆ. ಆದರೆ ನನ್ನ ಸ್ನೇಹಿತರು ನೋಡ ನೋಡುತ್ತಲೇ ನಾಪತ್ತೆಯಾದರೆಂದು ಹೇಳಿದ್ದಾರೆ.

ನದಿಯಲ್ಲಿ ನಾಪತ್ತೆಯಾಗಿರುವ ಯುವಕರು ವೆಸ್ಟ್ ಬೆಂಗಾಲ್ ಮೂಲದವರೆಂದು ಹೇಳಲಾಗುತ್ತಿದೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಯುವಕರು ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ನಂಜನಗೂಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನುರಿತ ಈಜು ತಜ್ಞರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ನಾಪತ್ತೆಯಾದವರಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: