ಕರ್ನಾಟಕಪ್ರಮುಖ ಸುದ್ದಿ

ಸರ್ಕಾರದಿಂದ ಬಾಕಿ : ಬಿಪಿಎಲ್ ಕಾರ್ಡ್ ಆರೋಗ್ಯಸೇವೆ ಸ್ಥಗಿತಗೊಳಿಸಲು ಖಾಸಗಿ ಆಸ್ಪತ್ರೆಗಳ ಚಿಂತನೆ?

ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳ ಅಡಿಯಲ್ಲಿ  ಖಾಸಗಿ ಆಸ್ಪತ್ರೆಗಳು ಬಿಪಿಎಲ್ ಕಾರ್ಡ್‍ದಾರರಿಗೆ ನೀಡುತ್ತಿದ್ದ ಉಚಿತ ಆರೋಗ್ಯ ಸೇವೆಯನ್ನು ಜ.16 ರಿಂದ ಸ್ಥಗಿತಗೊಳಿಸಲಾಗುವುದು ಎಂದು ಬಲ್ಲಮೂಲಗಳಿಂದ ಖಾತ್ರಿಯಾಗಿದೆ.

ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ನೀಡಬೇಕಾಗಿರುವ 100 ಕೋಟಿ ರೂಪಾಯಿಯನ್ನು ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ವಾಜಪೇಯಿ ಆರೋಗ್ಯ, ರಾಜೀವ್‍ಗಾಂಧಿ ಆರೋಗ್ಯ ಭಾಗ್ಯ, ಜ್ಯೋತಿ ಸಂಜೀವಿನಿ ಉಚಿತ ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸಲು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ನಿರ್ಧರಿಸಿರುವ ಕಾರಣ  ಜ.16 ರಿಂದ ಉಚಿತ ಆರೋಗ್ಯ ಸೇವೆಗಳು ಸ್ಥಗಿತಗೊಳ್ಳುವ ಸಾಧ್ಯತೆ ಇವೆ.

ಮಾರಣಾಂತಿಕ ಕಾಯಿಲೆ ಹೊಂದಿರುವ ಬಿಪಿಎಲ್ ಕಾರ್ಡ್‍ದಾರರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಶಸ್ತ್ರಚಿಕಿತ್ಸೆ ಸೇರಿದಂತೆ ಇತರೆ ಔಷಧೋಪಚಾರ ನೀಡಲಾಗುತ್ತಿತ್ತು. ಖಾಸಗಿ ಆಸ್ಪತ್ರೆಗಳ ಈ ನಿರ್ಧಾರದಿಂದ ಮುಂದಿನ ದಿನಗಳಲ್ಲಿ ಆದಾಯ ಮಿತಿ ಕಡಿಮೆ ಇರುವ ಕುಟುಂಬಗಳಿಗೆ ಆರೋಗ್ಯ ಸೇವೆ ಮರಿಚೀಕೆಯಾಗುವುದೋ ಅಥವಾ ಸರ್ಕಾರ ಎಚ್ಚೆತ್ತುಕೊಂಡು ಮುಂಜಾಗೃತಾ ಕ್ರಮ ವಹಿಸುವುದೋ ಕಾದು ನೋಡಬೇಕು.

Leave a Reply

comments

Related Articles

error: