ಮೈಸೂರು

ಕೃಷ್ಣ ಕೊಲೆ ಪ್ರಕರಣ : ಮತ್ತೊಬ್ಬ ಆರೋಪಿ ಬಂಧನ

ಮೈಸೂರಿನ ವಿವಿ ಮೊಹಲ್ಲಾದ 6ನೇ ಮುಖ್ಯರಸ್ತೆಯಲ್ಲಿ ಡಿ.23 ರಂದು ಚಿಕನ್ ಸ್ಟಾಲ್ ಮಾಲೀಕ ಕೃಷ್ಣ ಅಲಿಯಾಸ್ ಬೆಣ್ಣೆ ಕೃಷ್ಣ ಎಂಬವರನ್ನು ಹಾಡಹಗಲೇ ದುಷ್ಕರ್ಮಿಗಳು ಬರ್ಬರವಾಗಿ ಕೊಲೆಗೈದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 9 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಎಂ.ಜಿ.ಕೊಪ್ಪಲ್ ನಿವಾಸಿ ಭರತ್ ಎಂ.ಆರ್ ಅಲಿಯಾಸ್ ರಾಮಚಂದ್ರ(26) ಎಂದು ಗುರುತಿಸಲಾಗಿದೆ. ದೂರವಾಣಿ ಸಂಪರ್ಕದ ಮೂಲಕ ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಆರೋಪಿಗಳಾದ ವಿನಾಯಕ ನಗರ ನಿವಾಸಿಗಳಾದ ಮಂಜೇಶ್ ಅಲಿಯಾಸ್ ಚಿಕ್ಕಣ್ಣ(36), ಶ್ರೀನಿವಾಸ ಅಲಿಯಾಸ್ ಕುಂಡಶೀನ(35) ಎಂಬವರನ್ನು ಜ.9ರಂದು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಈಗಾಗಲೇ ಅವರು ಜಯಲಕ್ಷ್ಮಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ರಾಘು ಅಲಿಯಾಸ್ ಲಲ್ಲು ಮತ್ತು ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕರಿಯಪ್ಪನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು.

Leave a Reply

comments

Related Articles

error: