
ಸುದ್ದಿ ಸಂಕ್ಷಿಪ್ತ
ಶಿಷ್ಯವೇತನ: ಅರ್ಜಿ ಆಹ್ವಾನ
ಮೈಸೂರು. ಜ.1:- ವೃತ್ತಿರಂಗಭೂಮಿಯಲ್ಲಿ ತರಬೇತಿ ಪಡೆದು, ಅದೇ ಮಾಧ್ಯಮದಲ್ಲಿ ತೊಡಗಿಸಿಕೊಳ್ಳಲು ಆಸಕ್ತರಾಗಿರುವ ಯುವಕ/ಯುವತಿಯರಿಂದ ಶಿಷ್ಯವೇತನಕ್ಕಾಗಿ ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ಅರ್ಜಿ ಆಹ್ವಾನಿಸಿದೆ.
ಒಟ್ಟು 15 ಜನ ಆಯ್ಕೆ ಮಾಡಿ 6 ತಿಂಗಳಿಗೆ ಮಾಹೆಯಾನ 10000ರೂ. ಶಿಷ್ಯವೇತನ ನೀಡಲಾಗುವುದು. ಅರ್ಜಿ ಸಲ್ಲಿಸುವವರ ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೌಖಿಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಮೌಖಿಕ ಪರೀಕ್ಷೆಗೆ ಅಭ್ಯರ್ಥಿಗಳು ಹಾಜರಾಗಬಹುದು. ಕನಿಷ್ಠ 7ನೇ ತರಗತಿ ಓದಿರಬೇಕು ಹಾಗೂ ಕನ್ನಡ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವ ಕೌಶಲ್ಯ ಹೊಂದಿರಬೇಕು. ರಂಗಭೂಮಿಯಲ್ಲಿ ಅನುಭವವಿರುವವರಿಗೆ ಮೊದಲ ಆದ್ಯತೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಅರ್ಜಿಯನ್ನು ಜನವರಿ 10 ರೊಳಗೆ ಇಲ್ಲಿಗೆ ಸಲ್ಲಿಸುವುದು. ರಿಜಿಸ್ಟ್ರಾರ್, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ದೂರವಾಣಿ ಸಂಖ್ಯೆ 080-22237484 ನ್ನು ಸಂಪರ್ಕಿಸಬಹುದು. (ಕೆ.ಎಸ್,ಎಸ್.ಎಚ್)