ಕ್ರೀಡೆ

ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟ

ಸಿಡ್ನಿ,ಜ.2-ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಭಾರತ ತಂಡವನ್ನು ಪ್ರಕಟಿಸಲಾಗಿದೆ.

ತಂದೆಯಾಗಿರುವ ಸಂತಸದಲ್ಲಿರುವ ರೋಹಿತ್ ಶರ್ಮಾ ತವರಿಗೆ ವಾಪಾಸ್ಸಾಗಿದ್ದಾರೆ. ಹೀಗಾಗಿ ಸಿಡ್ನಿ ಟೆಸ್ಟ್ ಪಂದ್ಯಕ್ಕೆ ರೋಹಿತ್ ಅಲಭ್ಯರಾಗಲಿದ್ದು, ಶರ್ಮಾ ಸ್ಥಾನದಲ್ಲಿ ಕೆ.ಎಲ್.ರಾಹುಲ್ ಆಡಲಿದ್ದಾರೆ.

ರಾಹುಲ್ ಆಗಮನದಿಂದ, ಕಳೆದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಹನುಮಾ ವಿಹಾರಿ ಇದೀಗ ಮತ್ತೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಸಿಡ್ನಿ ಪಂದ್ಯದಲ್ಲಿ ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಹಾಗೂ ಕೆ.ಎಲ್.ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ತಂಡದಲ್ಲಿ ವೇಗದ ಎಸೆಗಾರ ಇಶಾಂತ್‌ ಶರ್ಮಾ ಅವರ ಬದಲು ಉಮೇಶ್‌ ಯಾದವ್‌ ಅವರನ್ನು ಸೇರಿಸಿಕೊಳ್ಳಲಾಗಿದೆ. ಉಮೇಶ್‌ ಯಾದವ್‌ ಅವರನ್ನು ಮೆಲ್ಬೋರ್ನ್ ಟೆಸ್ಟ್‌ನಿಂದ ಕೈಬಿಲಾಗಿತ್ತು. ಇದೀಗ ನಾಲ್ಕನೇ ಟೆಸ್ಟಿಗೆ ಇಶಾಂತ್‌ ಶರ್ಮಾ ಅವರ ಸ್ಥಾನಕ್ಕೆ ಉಮೇಶ್‌ ಯಾದವ್‌ ಸೇರಿಸಿಕೊಳ್ಳಲಾಗಿದೆ.

ಟೀಂ ಇಂಡಿಯಾ: ವಿರಾಟ್ ಕೊಹ್ಲಿ (ನಾಯಕ), ಮಯಾಂಕ್ ಅಗರ್ವಾಲ್, ಕೆ.ಎಲ್.ರಾಹುಲ್, ಚೇತೇಶ್ವರ್ ಪೂಜಾರ, ರಿಷಬ್ ಪಂತ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಆರ್.ಅಶ್ವಿನ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ. (ಎಂ.ಎನ್)

Leave a Reply

comments

Related Articles

error: