ಪ್ರಮುಖ ಸುದ್ದಿ

ಯಾರೇ ಬರಲಿ ನಮಗೆ ಸಮಸ್ಯೆ ಇಲ್ಲ, ನಮ್ಮ ಗುರಿ ಯಡಿಯೂರಪ್ಪ ಸಿಎಂ ಆಗಬೇಕು : ಶಾಸಕ ಸೋಮಶೇಖರ್ ರೆಡ್ಡಿ

ರಾಜ್ಯ(ಬಳ್ಳಾರಿ)ಜ.2:- ನಾಗೇಂದ್ರ ಬರಲಿ, ಯಾರೇ ಬರಲಿ ನಮಗೆ ಸಮಸ್ಯೆ ಇಲ್ಲ. ನಮ್ಮ ಗುರಿ ಯಡಿಯೂರಪ್ಪ ಸಿಎಂ ಆಗಬೇಕು ಎಂದು ಬಳ್ಳಾರಿ ನಗರ ಕ್ಷೇತ್ರದ  ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು  ಜಿಲ್ಲೆಯಲ್ಲಿ ಯಾರೇ ಬಂದರೂ ನಾವು ಸ್ವಾಗತಿಸುತ್ತೇವೆ. ಬಿಜೆಪಿ ಸರಕಾರ ರಚನೆಯಾಗಬೇಕು. ನಾಗೇಂದ್ರ ಬಿಜೆಪಿಗೆ ವಾಪಸ್ ಬಂದರೆ ಈ ಹಿಂದೆ ಸಹೋದರರಂತೆಯೇ ಇರುತ್ತೇವೆ. ಈಗಲೂ ಹಾಗೇಯೇ ಇದ್ದೇವೆ. ಬಿಎಸ್ವೈ ಸಿಎಂ ಇದ್ದಾಗ ನಮ್ಮ‌ ಜಿಲ್ಲೆಗೆ ಅನುದಾನ ಬರುತ್ತದೆ. ಸಮ್ಮಿಶ್ರ ಸರಕಾರದಿಂದ ಅಭಿವೃದ್ಧಿ ನಿರೀಕ್ಷೆ ಇಲ್ಲ. ಇದುವರೆಗೆ ಸರಕಾರ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: