ಕರ್ನಾಟಕಮೈಸೂರು

ರಾಜ್ಯಮಟ್ಟದ ಕವನ ಸ್ಪರ್ಧೆ: ಅವಧಿ ವಿಸ್ತರಣೆ

ರಾಜ್ಯಮಟ್ಟದ ಸಾಹಿತ್ಯಾತ್ಮಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ ಗ್ರಾಮಾಂತರ ಬುದ್ಧಿಜೀವಿಗಳ ಬಳಗವು ರಾಷ್ಟ್ರಕವಿ ಕುವೆಂಪುರವರ 112ನೇ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪು ನೆನಪಿನ ರಾಜ್ಯಮಟ್ಟದ ಕವನಗಳ ಸ್ಪರ್ಧೆಗೆ ಕವನಗಳನ್ನು ಕಳುಹಿಸಲು ಅಕ್ಟೋಬರ್ 30ರ ವರೆಗೆ ಅವಧಿ ವಿಸ್ತರಿಸಲಾಗಿದೆ.

ಮಹದಾಯಿ, ಕಾವೇರಿ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕವಿಗಳು, ಕವಯತ್ರಿಯರು ಭಾಗವಹಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಕವನ ಸ್ಪರ್ಧೆಯ ಅಂತಿಮ ದಿನವನ್ನು ವಿಸ್ತರಿಸಲಾಗಿದೆ ಎಂದು ಬಳಗದ ಅಧ್ಯಕ್ಷ ಭೇರ್ಯ ರಾಮ್ ಕುಮಾರ್ ಹಾಗೂ ಮಹಿಳಾ ಸಂಚಾಲಕಿ ಹೆಚ್.ಎನ್. ಸವಿತಾ ತಿಳಿಸಿದ್ದಾರೆ.

ಆಸಕ್ತಿಯುಳ್ಳ ಕವಿ-ಕವಯಿತ್ರಿಯರು ತಮ್ಮ ಎರಡು ಸ್ವ-ರಚಿತ ಕವನಗಳನ್ನು ಭೇರ್ಯ ರಾಮ್ ಕುಮಾರ್, ಅಧ್ಯಕ್ಷರು, ಗ್ರಾಮಾಂತರ ಬುದ್ಧಿಜೀವಿಗಳ ಬಳಗ, ಅರ್ಕೇಶ್ವರ ನಗರ ಬಡಾವಣೆ, ಕೆ.ಆರ್. ನಗರ ಟೌನ್, ಮೈಸೂರು-571602 ಇಲ್ಲಿಗೆ ಅಕ್ಟೋಬರ್ 30 ರ ಒಳಗೆ ತಲುಪಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9449680583ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: