ಕರ್ನಾಟಕ

ಹಾಸನ ಜಿಲ್ಲಾ ಕ್ರೀಡಾ ವಸತಿ ನಿಲಯಕ್ಕೆ ಕ್ರೀಡಾಪಟುಗಳ ಆಯ್ಕೆ

ಹಾಸನ (ಜ.2): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಡೆಸುತ್ತಿರುವ ಕ್ರೀಡಾ ಶಾಲೆ, ಕ್ರೀಡಾ ನಿಲಯಗಳಿಗೆ, ಹಾಗೂ ಹಾಸನ ಕ್ರೀಡಾ ವಸತಿ ಶಾಲೆಗೆ, 2019-20ನೇ ಸಾಲಿಗೆ ಅರ್ಹ ಕ್ರೀಡಾಪಟುಗಳನ್ನು ಆಯ್ಕೆ ಮಾಡಬೇಕಾಗಿರುತ್ತದೆ. ಈ ಸಂಬಂಧವಾಗಿ ಜಿಲ್ಲೆಯ ಎಲ್ಲಾ 8 ತಾಲ್ಲೂಕುಗಳಲ್ಲಿ ಜ. 9 ರಂದು ಆಲೂರು ಮತ್ತು ಸಕಲೇಶಪುರ ತಾಲ್ಲೂಕು ಕ್ರೀಡಾಂಗಣದಲ್ಲಿ, ಜ.10 ರಂದು ಹೊಳೆನರಸೀಪುರ (ತಾಲ್ಲೂಕು ಕ್ರೀಡಾಂಣ) ಮತ್ತು ಅರಕಲಗೂಡು (ಸರ್ಕಾರಿ ಪದವಿ ಪೂರ್ವ ಕಾಲೇಜು), ಜ.11 ರಂದು ಬೇಲೂರು (ಸರ್ಕಾರಿ ಪದವಿಪೂರ್ವ ಕಾಲೇಜು) ಮತ್ತು ಅರಸೀಕೆರೆ (ರೈಲ್ವೇ ಕ್ರೀಡಾ ಮೈದಾನ), ಜ.12 ರಂದು ದಿಡಗ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ) ಮತ್ತು ಚನ್ನರಾಯಪಟ್ಟಣ (ತಾಲ್ಲೂಕು ಕ್ರೀಡಾಂಗಣ), ಜ.16 ರಂದು ಶಾಂತಿಗ್ರಾಮ (ಸರ್ಕಾರಿ ಪದವಿ ಪೂರ್ವ ಕಾಲೇಜು) ಮತ್ತು ಹಾಸನ (ಜಿಲ್ಲಾ ಕ್ರೀಡಾಂಗಣ)ದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಆಯ್ಕೆಯನ್ನು ನಡೆಸಲಾಗುವುದು.

ಕಿರಿಯರ ವಿಭಾಗ: ಅರ್ಹತೆ: ಬಾಲಕ/ಬಾಲಕಿಯರು ಜೂ.1 ಕ್ಕೆ 14 ವರ್ಷ ಮೀರಿರಬಾರದು ಹಾಗೂ 8ನೇ ತರಗತಿ ಸೇರಲು ಅರ್ಹತೆ ಪಡೆದಿರಬೇಕು. ಕಿರಿಯರ ವಿಭಾಗದ 2ನೇ ಹಂತದ ರಾಜ್ಯಮಟ್ಟದ ಆಯ್ಕೆ ಜ.28 ಮತ್ತು 29 ರಂದು ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಗುವುದು.
ಅಥ್ಲೆಟಿಕ್ಸ್, ಹಾಕಿ, ಬ್ಯಾಸ್ಕೆಟ್ಬಾಲ್: ಬಾಲಕ/ಬಾಲಕಿಯರಿಗಾಗಿ, (ಬಾಲಕರು ಕನಿಷ್ಠ ಎತ್ತರ 13 ವರ್ಷದವರೆಗೆ 171 ಸೆಂ.ಮೀ, ಸೈಕ್ಲಿಂಗ್, ಜೂಡೋ, ಬಾಲಕ/ಬಾಲಕಿಯರಿಗಾಗಿ ಮತ್ತು ಕುಸ್ತಿ: ಬಾಲಕರಿಗೆ ಮಾತ್ರ.

ವಾಲಿಬಾಲ್: ಬಾಲಕ/ಬಾಲಕಿಯರಿಗಾಗಿ, ಬಾಲಕರು: ಕನಿಷ್ಠ ಎತ್ತರ 12 ರಿಂದ 14 ವರ್ಷದವರೆಗೆ 170 ಸೆಂಮೀ, ಫುಟ್ ಬಾಲ್: ಬಾಲಕರಿಗೆ ಮಾತ್ರ, ಕನಿಷ್ಠ ಎತ್ತರ 145 ಸೆಂ.ಮೀ, ತೂಕ 35 ಕೆ.ಜಿ, ಬಾಲಕರು: ಕನಿಷ್ಠ ಎತ್ತರ 145 ಸೆಂ.ವೀ. ಬಾಲಕಿಯರು, ಜಿಮ್ನಾಸ್ಟ್ರಿಕ್ಸ್: ಬಾಲಕ/ ಬಾಲಕಿಯರಿಗಾಗಿ, ಬಾಲಕರು: ಕನಿಷ್ಠ ಎತ್ತರ 145 ಸೆಂ.ಮೀ, ಬಾಲಕಿಯರು ಕನಿಷ್ಠ ಎತ್ತರ 140 ಸೆಂ.ಮೀ.

ಹಿರಿಯರ ವಿಭಾಗ ಅರ್ಹತೆ: ಬಾಲಕ/ಬಾಲಕಿಯರು ಜೂ.1 ಕ್ಕೆ ವರ್ಷ ಮೀರಿರಬಾರದು ಹಾಗೂ ಪ್ರಥಮ ಪಿ.ಯು.ಸಿ.ಗೆ ಸೇರಲು ಅರ್ಹತೆ ಪಡೆದಿರಬೇಕು.
ಅಥ್ಲೆಟಿಕ್ಸ್, ಬ್ಯಾಸ್ಕೆಟ್ಬಾಲ್: ಬಾಲಕ/ಬಾಲಕಿಯರಿಗಾಗಿ, (ಬಾಲಕರು ಕನಿಷ್ಠ ಎತ್ತರ 13 ವರ್ಷದವರೆಗೆ 171 ಸೆಂ.ಮೀ, ಸೈಕ್ಲಿಂಗ್, ಜೂಡೋ, ಬಾಲಕ/ಬಾಲಕಿಯರಿಗಾಗಿ ಮತ್ತು ಕುಸ್ತಿ: ಬಾಲಕರಿಗೆ ಮಾತ್ರ.

ವಾಲಿಬಾಲ್: ಬಾಲಕ/ಬಾಲಕಿಯರಿಗಾಗಿ, ಬಾಲಕರು: ಕನಿಷ್ಠ ಎತ್ತರ 180 ಸೆಂ.ಮೀ ಯುವತಿಯರು :ಕನಿಷ್ಠ ಎತ್ತರ 165 ಸೆಂ.ವೀ) ವಾಲಿಬಾಲ್: ಯುವಕ/ಯುವತಿಯರಿಗಾಗಿ (ಯುವಕರು: ಕನಿಷ್ಠ ಎತ್ತರ 17 ವರ್ಷದವರೆಗೆ 183 ಹಾಗೂ 17 ವರ್ಷ ಮೇಲ್ಪಟ್ಟು 185 ಸೆಂ.ಮೀ) (ಯುವತಿಯರು: ಕನಿಷ್ಟ ಎತ್ತರ 16 ವರ್ಷದವರಿಗೆ 167 ಹಾಗೂ 16ವರ್ಷ ಮೇಲ್ಪಟ್ಟು 170 ಸೆಂ.ಮೀ), ಹಾಕಿ: ಯುವಕ/ಯುವರಿಯರಿಗಾಗಿ, ಫುಟ್‍ಬಾಲ್ ಯುವಕರಿಗೆ ಮಾತ್ರ (ಬಾಲಕರು: ಕನಿಷ್ಠ ಎತ್ತರ 165 ಸೆಂ.ಮೀ. ಕನಿಷ್ಠ ತೂಕ 35 ಕೆ.ಜಿ), ಜೂಡೋ ಮತ್ತು ಸೈಕ್ಲಿಂಗ್ ಯುವಕ/ಯುವತಿಯರಿಗಾಗಿ ಮತ್ತು ಕುಸ್ತಿ ಯುವಕರಿಗಾಗಿ ಮಾತ್ರ.

ಸದರಿ ಆಯ್ಕೆ ಟ್ರಯಲ್ಸ್‍ನಲ್ಲಿ ಭಾಗವಹಿಸುವ ಸ್ಫರ್ಧಾಳುಗಳಿಗೆ ಪ್ರಯಾಣ ಭತ್ಯೆ ಹಾಗೂ ದಿನಭತ್ಯೆಯನ್ನು ಇಲಾಖೆಯಿಂದ ನೀಡಲಾಗುವುದಿಲ್ಲ, ಹೆಚ್ಚಿನ ಮಾಹಿತಿಗಾಗಿ: ಹೆಚ್.ಬಿ. ರವೀಶ್, ಹಾಕಿ ತರಬೇತಿದಾರರು: 9448346424, ಹೆಚ್.ಎಲ್. ಸುಬ್ರಮಣ್ಯ, ಬ್ಯಾಸ್ಕೆಟ್‍ಬಾಲ್ ತರಬೇತಿದಾರರು 9449155949, ಎಸ್.ಎನ್.ರಮೇಶ್, ವಾಲಿಬಾಲ್ ತರಬೇತಿದಾರರು-8951794434, ರಾಜೇಶ್ ಪತ್ತಾರ್ 9480480966, ಎನ್.ಡಿ. ಜಯರಾಮ್, ವಾಲಿಬಾಲ್ ತರಬೇತಿದಾರರು-9141796533, ಕಚೇರಿ ದೂರವಾಣಿ ಸಂಖ್ಯೆ: 08172-246056 ಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: