ಲೈಫ್ & ಸ್ಟೈಲ್

ಮೊಬೈಲ್ ಮಾರುಕಟ್ಟೆಯನ್ನು ಆಳಲಿವೆ ಈ ಸ್ಮಾರ್ಟ್‌ಫೋನ್ಸ್! ಬೆಲೆ ರೂ.12,999 ಅಷ್ಟೆ!

ಬೆಂಗಳೂರು (ಜ.2): ಹೊಸ ವರ್ಷದ ಸಂಭ್ರಮಕ್ಕೆ ಒಂದು ಅತ್ಯುತ್ತಮ ಬಜೆಟ್ ಬೆಲೆಯ ಸ್ಮಾರ್ಟ್‌ಪೋನ್ ಒಂದನ್ನು ಖರೀದಿಸುವ ಆಸೆ ನಿಮಗಿದ್ದರೆ ಇಂದು ನಾವು ಹೇಳುವ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ನಿಮ್ಮ ನೆಚ್ಚಿನ ಆಯ್ಕೆಯಾಗಬಹುದು.

ಏಕೆಂದರೆ, ದೇಶದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ತಮ ಬಜೆಟ್ ಸ್ಮಾರ್ಟ್‌ಫೋನ್ ಇವಾಗಿದ್ದು, ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಆಸುಸ್ ಕಂಪೆನಿಯ ಝೆನ್ಫೋನ್ ಮ್ಯಾಕ್ಸ್ ಪ್ರೊ ಎಂ2 ಮತ್ತು ಆಸುಸ್ ಝೆನ್ಫೋನ್ ಮ್ಯಾಕ್ಸ್ ಎಂ2 ಸರಣಿಯ ಸ್ಮಾರ್ಟ್‌ಫೋನ್‌ಗಳು ಹೊಸ ವರ್ಷಕ್ಕೆ ಖರೀದಿಸಬಹುದಾದ ಬೆಸ್ಟ್ ಆಯ್ಕೆಗಳಾಗಿವೆ.

ಹೌದು, ಆಸುಸ್ ಕಂಪೆನಿಯ ‘ಝೆನ್ಫೋನ್ ಮ್ಯಾಕ್ಸ್ ಪ್ರೊ ಎಂ2’ ಮತ್ತು ‘ಝೆನ್ಫೋನ್ ಮ್ಯಾಕ್ಸ್ ಎಂ2’ ಎರಡು ಬ್ರ್ಯಾಂಡ್‌ಗಳಲ್ಲಿ ಒಟ್ಟು ಐದು ಮಾದರಿಯ ಸ್ಮಾರ್ಟ್‌ಫೋನ್‌ಗಳು ಭಾರತದ ಮಾರುಕಟ್ಟೆಗೆ ಇತ್ತೀಚಿಗಷ್ಟೇ ಎಂಟ್ರಿ ನೀಡಿ ಗಮನಸೆಳೆಯುತ್ತಿವೆ.

‘ಮ್ಯಾಕ್ಸ್ ಪ್ರೊ ಎಂ2’ ಬೆಲೆಗಳು ಕ್ರಮವಾಗಿ, (3/32 ಮಾದರಿ) 12,999 ರೂ, (4/64 ಮಾದರಿ) 14,999 ರೂ. ಮತ್ತು 16,999. (6/64 ಮಾದರಿ) ರೂ.ಗಳಾಗಿದ್ದರೆ, ‘ಮ್ಯಾಕ್ಸ್ ಎಂ2’ ಬೆಲೆಗಳು ಕ್ರಮವಾಗಿ, (3/32 ಮಾದರಿ) 9,999 ರೂ. ಮತ್ತು (4/64 ಮಾದರಿ) 11,999 ರೂ.ಗಳಾಗಿವೆ. ಹಾಗಾಗಿ, ಇವು ಸೂಪರ್ ಬಜೆಟ್ ಸ್ಮಾರ್ಟ್‌ಫೋನ್‌ಗಳು ಎಂದು ಈಗಾಗಲೇ ಕರೆಸಿಕೊಂಡಿವೆ. (ಎನ್.ಬಿ)

Leave a Reply

comments

Related Articles

error: