ಸುದ್ದಿ ಸಂಕ್ಷಿಪ್ತ
ಜ.4ರಂದು ಮಕ್ಕಳ ಪುಸ್ತಕ ಬಿಡುಗಡೆ
ಮೈಸೂರು,ಜ.2 : ಕೃಷ್ಣಮೂರ್ತಿಪುರಂನ ಶಿಶುಸಾಹಿತ್ಯ ಸಂಘದ 71ನೆಯ ವಾರ್ಷಿಕೋತ್ಸವ ಹಾಗೂ ಮಕ್ಕಳ ಪುಸ್ತಕ ಬಿಡುಗಡೆಯನ್ನು ಜ.4ರ ಸಂಜೆ 4.30ಕ್ಕೆ ಸಂಘದ ಆವರಣದಲ್ಲಿ ಏರ್ಪಡಿಸಲಾಗಿದೆ.
ಕುಮುದಾ ರಾವೆಂಶ್ರೀ ಬರೆದಿರುವ ‘ಮಕ್ಕಳ ಮನರಂಜಿಸುವ ಕಥೆಗಳು’ ಕೃತಿಯನ್ನು ಲೇಖಕಿ ಲೀಲಾವತಿ ಎಸ್.ರಾವ್ ಬಿಡುಗಡೆಗೊಳಿಸುವರು. ನಿವೃತ್ತ ಶಿಕ್ಷಕಿ ಲೀಲಾ ಮಣ್ಣಾಲ ಮುಖ್ಯ ಅತಿಥಿಯಾಗಿದ್ದಾರೆ ಎಂದು ಯಶಸ್ವಿನಿ ಜಗದೀಶ್ ಅವರು ತಿಳಿಸಿದ್ದಾರೆ. (ಕೆ.ಎಂ.ಆರ್)