ಮೈಸೂರು

ಕ್ರಿಕೆಟ್ ಬೆಟ್ಟಿಂಗ್ : ಓರ್ವನ ಬಂಧನ ; 25,000ರೂ. ವಶ

ಮೈಸೂರು,ಜ.3:- ಮೈಸೂರು ನಗರ ಸಿ.ಸಿ.ಬಿ. ಪೊಲೀಸರು ಮಾಹಿತಿ ಮೇರೆಗೆ ನಿನ್ನೆ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆಲನಹಳ್ಳಿ ಬಡಾವಣೆಯ , ಬ್ರಿಗೇಡ್ ಸಾಲಿಟೇರ್ ಅಪಾರ್ಟ್‍ಮೆಂಟ್, ಫ್ಲಾಟ್ ನಂ: 104ರ ಮೇಲೆ  ದಾಳಿ ಮಾಡಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ ಕ್ರಿಕೆಟ್ ಮ್ಯಾಚ್ ನ ಮೇಲೆ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಓರ್ವನನ್ನು ಬಂಧಿಸಿದ್ದಾರೆ.

ಬಂಧಿತನನ್ನು  ಚಂದ್ರಬಾನು ಸಿ ಹಿಂದೂಜಾ ಬಿನ್ ಚುಗೋಮಲ್, ಆಲನಹಳ್ಳಿ ಬಡಾವಣೆ, ಎಂದು ಗುರುತಿಸಲಾಗಿದ್ದು, ಈತನನ್ನು ದಸ್ತಗಿರಿ ಮಾಡಿ, ಈತನಿಂದ ಕ್ರಿಕೆಟ್ ಬೆಟ್ಟಿಂಗ್ ಗೆ ಬಳಕೆಯಾಗಿದ್ದ 25,000ರೂ. ನಗದು ಹಣ, 1 ಟಿ.ವಿ, 2 ಮೊಬೈಲ್ ಫೋನ್ 1 ಸೆಟ್ ಟಾಪ್ ಬಾಕ್ಸ್ ಇತ್ಯಾದಿ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ದಾಳಿ ಕಾರ್ಯವನ್ನು ಮೈಸೂರು ನಗರದ ಅಪರಾಧ ವಿಭಾಗದ  ಡಿ.ಸಿ.ಪಿ. ಡಾ. ವಿಕ್ರಮ್ ಅಮಟೆ ಮಾರ್ಗದರ್ಶನದಲ್ಲಿ ಸಿ.ಸಿ.ಬಿ. ಘಟಕದ ಎ.ಸಿ.ಪಿ. ಬಿ.ಆರ್. ಲಿಂಗಪ್ಪ ಅವರ ನೇತೃತ್ವದಲ್ಲಿ ಸಿ.ಸಿ.ಬಿ. ಯ ಪೊಲೀಸ್ ಇನ್ಸಪೆಕ್ಟರ್ ಮಲ್ಲೇಶ್. ಎ, ಮತ್ತು ಸಿಬ್ಬಂದಿಯವರಾದ ರಾಜು, ಪುರುಷೋತ್ತಮ್, ರಘು, ರಾಜಶ್ರೀ, ಧನಂಜಯ, ಶ್ರೀನಿವಾಸ ಪ್ರಸಾದ್ ಮಾಡಿರುತ್ತಾರೆ. (ಎಸ್.ಎಚ್)

Leave a Reply

comments

Related Articles

error: