ಪ್ರಮುಖ ಸುದ್ದಿಮನರಂಜನೆ

ಮತ್ತೆ ವಿವಾದದ ಸುಳಿಯಲ್ಲಿ ಸಿಲುಕಿದ ‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ : ಅನುಪಮ್ ಖೇರ್ ವಿರುದ್ಧ ಕೇಸ್

ದೇಶ(ನವದೆಹಲಿ)ಜ.3:- ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಕುರಿತು ನಿರ್ಮಿತವಾದ ಚಿತ್ರ ‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಮತ್ತೊಂದು ವಿವಾದದಲ್ಲಿ ಸಿಲುಕಿದೆ.

ಚಿತ್ರದಲ್ಲಿ ಮುಖ್ಯಪಾತ್ರ ನಿರ್ವಹಿಸುತ್ತಿರುವ ನಟ ಅನುಪಮ್ ಖೇರ್  ಮತ್ತು ಅನ್ಯ ಕಲಾವಿದರ ವಿರುದ್ಧ ಬಿಹಾರದಲ್ಲಿ ದೂರು ದಾಖಲಿಸಲಾಗಿದ್ದು ಪ್ರಕರಣ ದಾಖಲಾಗಿದೆಯಂತೆ. ಚಿತ್ರದ ಮೂಲಕ ಉನ್ನತ ಜನರ  ಇಮೇಜ್ ಗೆ ಧಕ್ಕೆಯುಂಟು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆಯಂತೆ.

ಚಿತ್ರವು ಜನವರಿ 11ರಂದು ಬಿಡುಗಡೆಯಾಗಲಿದ್ದು, ಯೂಟ್ಯೂಬ್ ನಲ್ಲಿ ಹರಿಬಿಟ್ಟ ಚಿತ್ರದ ಟ್ರೈಲರ್ ನ್ನು ತೆಗೆಯಲಾಗಿದೆ ಎಂದು ನಟ ಅನುಪಮ್ ಖೇರ್ ದೂರಿದ್ದರು.

ಬಿಹಾರದ ಸ್ಥಳೀಯ ಕೋರ್ಟ್ ನಲ್ಲಿ ಅನುಪಮ್ ಖೇರ್ ಸೇರಿದಂತೆ ನಿರ್ಮಾಪಕರು, ಸಹನಟರ ವಿರುದ್ಧ ಕೇಸ್ ದಾಖಲಾಗಿದೆ. ಸುಧೀರ್ ಕುಮಾರ್ ಓಝಾ ಎಂಬ ವಕೀಲ ಕೇಸ್ ದಾಖಲಿಸಿದ್ದು, ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ಜ.8ರಂದು ವಿಚಾರಣೆ ನಡೆಸಲು ನಿರ್ಧರಿಸಿದೆ. ಹತ್ತು ವರ್ಷಗಳ ಕಾಲ ಯುಪಿಎ ಅಧಿಕಾರಾವಧಿಯಲ್ಲಿ ಪ್ರಧಾನಿಯಾಗಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಾತ್ರದಲ್ಲಿ ನಟಿಸಿರುವ ಅನುಪಮ್ ಖೇರ್ ಮತ್ತು ಮಾಧ್ಯಮ ಸಲಹೆಗಾರ ಸಂಜಯ್ ಬರು ಆಗಿ ಕಾಣಿಸಿಕೊಂಡಿರುವ ನಟ ಅಕ್ಷಯ್ ಖನ್ನಾ ಇಬ್ಬರ ಇಮೇಜ್ ಗೂ ಧಕ್ಕೆ ತಂದಿದ್ದಾರೆ.ಇದರಿಂದ ನನಗೆ ಹಾಗೂ ಸಾರ್ವಜನಿಕರಿಗೆ ನೋವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾನೆ ಎನ್ನಲಾಗಿದೆ. (ಎಸ್.ಎಚ್)

Leave a Reply

comments

Related Articles

error: