ಕರ್ನಾಟಕ

ಬೆಂಗಳೂರು ಮಾಜಿ ಮೇಯರ್ ಬಿಜೆಪಿಯಿಂದ ಅಮಾನತು; ರಾಯಣ್ಣ ಬ್ರಿಗೇಡ್ ಮೇಲೆ ಮೊದಲ ಪ್ರಹಾರ

ಬೆಂಗಳೂರು: ರಾಯಣ್ಣ ಬ್ರಿಗೇಡ್‍ ಮೇಲೆ ಬಿಜೆಪಿ ಮೊದಲ ಪ್ರಹಾರ ನಡೆಸಿದೆ. ಬಿಬಿಎಂಪಿಯ ಮಾಜಿ ಮೇಯರ್ ವೆಂಕಟೇಶ ಮೂರ್ತಿ ಅವರನ್ನು ಅಮಾನತು ಮಾಡುವ ಮೂಲಕ ಬಿಸಿ ಮುಟ್ಟಿಸಿದೆ. ಬೆಂಗಳೂರು ಮಹಾನಗರ ಬಿಜೆಪಿ ಅಧ್ಯಕ್ಷ ಪಿ.ಎ. ಸದಾಶಿವ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.

ಅಮಾತನು ಕುರಿತು ಪ್ರತಿಕ್ರಿಯೆ ನೀಡಿರುವ ವೆಂಕಟೇಶ್ ಮೂರ್ತಿ ಅವರು, ಹತ್ತು ವರ್ಷಗಳಿಂದ ರಾಯಣ್ಣ ಬ್ರಿಗೇಡ್ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಆ ಸಂದರ್ಭ ಪ್ರಶ್ನೆ ಮಾಡದಿದ್ದ ಪಕ್ಷ, ಈಗ ಏಕಾಏಕಿ ಕ್ರಮ ತೆಗೆದುಕೊಂಡಿರುವುದು ಆಶ್ವರ್ಯ ಉಂಟು ಮಾಡಿದೆ. ನಾನು ಬಿಜೆಪಿಯ ಸಕ್ರಿಯ ಕಾರ್ಯಕರ್ತ. ಬ್ರಿಗೇಡ್ ಸಂಘಟನೆ ಪಕ್ಷದ ಸಂಘಟನೆಗೆ ಪೂರಕವಾಗಿಯೇ ಇದೆ. ಈ ವಿಷಯದಲ್ಲಿ ಮಹಾನಗರ ಬಿಜೆಪಿ ಅಧ್ಯಕ್ಷರಿಗೆ ಸೂಕ್ತವಾಗಿ ವಿವರಣೆ ನೀಡಿ ಅಮಾನತು ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಕೋರುತ್ತೇನೆ ಎಂದಿದ್ದಾರೆ.

ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಈ ಸಂಘಟನೆಗೆ ಈ ಹಿಂದೆ ಪೋಷಕರಾಗಿದ್ದರೂ ಅವರೀಗ ಬೆಂಬಲ ಇಲ್ಲ ಎಂದು ಹೇಳಿದ್ದಾರೆ. ಆದರೆ ವೆಂಕಟೇಶಮೂರ್ತಿ ಅವರು ಬ್ರಿಗೇಡ್‍’ಗೆ ಬೆಂಗಳೂರು ಪ್ರಧಾನ ಕಾರ್ಯದರ್ಶಿ ಆಗಿರುವುದರಿಂದ ಬ್ರಿಗೇಡ್ ಸಂಘಟನೆಯಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಹೀಗಾಗಿ ಬಿಜೆಪಿ ಅವರನ್ನೇ ಗುರಿಯಾಗಿಸಿ ಕ್ರಮ ಕೈಗೊಂಡಿದೆ ಎನ್ನಲಾಗುತ್ತಿದೆ.

ಬ್ರಿಗೇಡ್ ಸಂಘಟನೆಗೆ ಬೆಂಬಲವಿಲ್ಲ ಎಂದು ಈಶ್ವರಪ್ಪ ಹೇಳಿದ ನಂತರ ಸ್ವಲ್ಪ ದಿನಗಳಲ್ಲೇ ಬಿಜೆಪಿಯಿಂದ ಈ ಕ್ರಮ ಜರುಗಿದೆ.

Leave a Reply

comments

Related Articles

error: