ಪ್ರಮುಖ ಸುದ್ದಿಮೈಸೂರು

ಜ.11 ರಿಂದ 13ರವರೆಗೆ ‘ಕೊಡಗು ಉತ್ಸವ’

ಕೊಡಗಿನ ಪ್ರವಾಸೋದ್ಯಮದ ಪುನಶ್ಚೇತನಕ್ಕೆ ಮೂರು ದಿನಗಳ ಉತ್ಸವ

ಮೈಸೂರು, ಜ.3 : ಕಳೆದ ಆಗಸ್ಟ್ ನಲ್ಲಿ  ಜಲಪ್ರಳಯದಿಂದ ಕೊಡಗಿನ ಪ್ರವಾಸೋದ್ಯಮಕ್ಕೆ ಬಿದ್ದಿರುವ ಹೊಡೆತ ಹೋಗಲಾಡಿಸುವ ನಿಟ್ಟನಿಲ್ಲಿ ಪ್ರವಾಸೋದ್ಯಮ ಇಲಾಖೆ ಇದೇ ಜ. 11 ರಿಂದ 13ರವರೆಗೆ ಕೊಡಗು ಉತ್ಸವ ಕಾರ್ಯಕ್ರಮ ಆಯೋಜಿಸಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಎಚ್. ಜನಾರ್ಧನ್ ತಿಳಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಹೊಟೇಲ್ ಮಾಲೀಕರ ಸಂಘ, ಹೋಟೆಲ್ ಮಾಲೀಕರ ಸಂಘದ ಧರ್ಮದತ್ತಿಯಿಂದ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ, ಮೈಸೂರಿಗೆ ಬರುವ ಪ್ರವಾಸಿಗರೂ ಮೈಸೂರನ್ನ ಕೇಂದ್ರವಾಗಿರಿಸಿಕೊಂಡು ಸರ್ಕ್ಯೂಟ್ ಇರಿಸಿಕೊಂಡೇ ಆಗಮಿಸುತ್ತಾರೆ. ಇವರು ಪ್ರವಾಸವನ್ನು ಇದೇ ಜಿಲ್ಲೆಗೆ ಸೀಮಿತಗೊಳಿಸಿಕೊಳ್ಳದೇ ನೆರೆಯ ಮಂಡ್ಯ, ಕೊಡಗಿನ ಪ್ರವಾಸೀ ಕೇಂದ್ರಗಳಿಗೂ ಭೇಟಿ ನೀಡುತ್ತಾರೆ. ಹೀಗಾಗಿ ಹೊಟೇಲ್ ಮಾಲೀಕರ ಸಂಘ ಹೊರತಂದಿರುವ ಕ್ಯಾಲೆಂಡರ್ ಈ ಎಲ್ಲ ಪ್ರವಾಸೀ ತಾಣಗಳ ಬಗೆಗಿನ ಸೂಕ್ತ ಸಚಿತ್ರ ಮಾಹಿತಿ ಒಳಗೊಳ್ಳುವ ಮೂಲಕ ಉಪಯುಕ್ತವಾಗಿದೆ ಎಂದು ಶ್ಲಾಘಿಸಿದರು.

ನಂತರ ಮಾತನಾಡಿದ ಸಂಘದ ಅಧ್ಯಕ್ಷ ನಾರಾಯಣ ಗೌಡ  ಅವರು, ನಗರಕ್ಕೆ ಲಕ್ಷಾಂತರ ಪ್ರವಾಸಿಗರು ಬೇಟಿ ನೀಡುತ್ತಾರೆ, ಈ ಸಂದರ್ಭದಲ್ಲಿ ತಮ್ಮ ವ್ಯಾಪಾರ ಕೇಂದ್ರಗಳಾದ ಹೋಟೆಲ್, ಉಪಹಾರಗೃಹ, ಸ್ವೀಟ್ಸ್, ಬೇಕರಿಗಳಲ್ಲಿ ಈ ಕ್ಯಾಲೆಂಡರ್ ನೋಡಿ ಜನಾಕರ್ಷಣೆಗೊಳಗಾಗಿ ಮತ್ತಷ್ಟು ಆಪ್ತವಾಗಲಿವೆ, ಆಗ ಅದರ ಬಗ್ಗೆ ಮಾಹಿತಿ ಪಡೆದು ಬೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಉಂಟು, ಆದ್ದರಿಂದ ಜಿಲ್ಲೆಯ ಪ್ರವಾಸಿತಾಣಗಳನ್ನು ಜನಪ್ರಿಯತಾಣವನ್ನಾಗಿಸುವ ನಿಟ್ಟಿನಲ್ಲಿ ದಿನದರ್ಶಿಕೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

ಮೈಸೂರಿನ ವಿವಿಧ ಪ್ರವಾಸಿತಾಣಗಳನ್ನು ಪರಿಚಯಿಸುವ ವರ್ಣರಂಜಿತ ಕ್ಯಾಲೆಂಡರನ್ನು ಕಳೆದ ನಾಲ್ಕು ವರ್ಷಗಳಿಂದಲೂ ನಿರಂತರವಾಗಿ ಸಂಘದಿಂದ ಹೊರತರುತ್ತಿರಲಾಗುತ್ತಿದ್ದು, ಈ ಸಾಲಿನ ದಿನದರ್ಶಿಕೆಯಲ್ಲಿ ಚಾಮುಂಡಿಬೆಟ್ಟ, ಬಲರಾಮ ದ್ವಾರದಿಂದ ಚಾಮರಾಜ ವೃತ್ತ, ಜಿಲ್ಲೆಯ ಪ್ರತಿಷ್ಠಿತ ಜಾತ್ರೆಗಳು, ರೈತರ ಸಾಂಸ್ಕೃತಿಕ ಚಿತ್ರಗಳು, ಶ್ರೀರಂಗಪಟ್ಟಣದ ಪ್ರವಾಸಿ ಸ್ಥಳಗಳು, ಬೃಂದಾವನ ಅಣೆಕಟ್ಟು, ಬಸವ ಸೋಮನಾಥಪುರ, ಗಗನಚುಕ್ಕಿ, ಭರಚುಕ್ಕಿ ಮತ್ತು ಖಾಸಗಿ ಅರಮನೆಯ ದಸರಾ, ಕೊಡಗು, ಟಿಬೆಟ್ ಕ್ಯಾಂಪ್, ದುಬಾರೆ ಮತ್ತು ಬೆಳದಿಂಗಳ ಬೆಳಕಿನಲ್ಲಿ ಮೈಸೂರು ಅರಮನೆಯ ಚಿತ್ರಗಳನ್ನೊಳಗೊಂಡ ಎಂದು ತಿಳಿಸಿದರು.

ಟ್ರಸ್ಟ್ ಅಧ್ಯಕ್ಷ ರವಿಶಾಸ್ತ್ರಿ, ಉಪಾಧ್ಯಕ್ಷ ಸುರೇಶ್ ಉಗ್ರಯ್ಯ, ಕಾರ್ಯದರ್ಶಿ ಸುಬ್ರಹ್ಮಣ್ಯ ತಂತ್ರಿ, ಖಜಾಂಚಿ ಎ.ಸತೀಶ್, ಜಂಟಿ ಕಾರ್ಯದರ್ಶಿ ಗುರುಸ್ವೀಟ್ ಕುಮಾರ್, ಕೆ.ಭಾಸ್ಕರ್ ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: