ಮೈಸೂರು

ಸಾರಿಗೆ ಇಲಾಖೆಯಲ್ಲಿನ ವಿವಿಧ ಶುಲ್ಕ ಹೆಚ್ಚಳಕ್ಕೆ ವಿರೋಧ : ಪ್ರತಿಭಟನೆ

ಕೇಂದ್ರ ಸರ್ಕಾರ ಸಾರಿಗೆ ಇಲಾಖೆಯಲ್ಲಿನ ವಿವಿಧ ಶುಲ್ಕಗಳನ್ನು ಅವೈಜ್ಞಾನಿಕ ರೀತಿಯಲ್ಲಿ ಹೆಚ್ಚಿಸಿದ್ದು, ಸಾರ್ವಜನಿಕರಿಗೆ ಇದರಿಂದ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಮೈಸೂರಿನ ಪ್ರಾದೇಶಿಕ ಸಾರಿಗೆ ಕಚೇರಿ ವೃತ್ತದ ಬಳಿ ಬುಧವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಕೇಂದ್ರ ಸರ್ಕಾರ ಸಾರಿಗೆ ಇಲಾಖೆಯ ಪರವಾನಗಿ ಶುಲ್ಕ, ನವೀಕರಣ ಶುಲ್ಕ, ಚಾಲನಾ ಪರವಾನಗಿ ವಿತರಣೆಯ ಶುಲ್ಕವನ್ನು ಏರಿಸಿದ್ದು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಇದರಿಂದ ತೊಂದರೆಯಾಗುತ್ತಿದೆ. ಮಧ್ಯಮವರ್ಗದ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಶುಲ್ಕ ಏರಿಕೆಯನ್ನು ಮರುಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯು ಪಾಲಿಕೆ ಸದಸ್ಯರು, ಸಾರ್ವಜನಿಕರು, ಜಿಲ್ಲಾಮೋಟಾರು ವಾಹನಗಳ ಮಾಲಿಕರು, ಪ್ರಾಂಶುಪಾಲರ ಸಂಘ, ಜಿಲ್ಲಾ ವಾಹನಗಳ ಮಾಲಿಕರ ಪ್ರತಿನಿಧಿಗಳ ಸಂಘದ ಆಶ್ರಯದಲ್ಲಿ ನಡೆಯಿತು.
ಈ ಸಂದರ್ಭ ಆನಂದ್, ವೀಣಾ, ದೀಪಕ್, ಸಮೀರ್, ರಾಜು, ಸಂತೋಷ್, ಶ್ರೀನಿವಾಸ್, ಶಂಖರ್, ಮುಜಮಿಲ್, ಶಿವು, ಕಾಂತರಾಜು, ಮಹದೇವ, ಕೃಷ್ಣಸಿಂಗ್ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

comments

Related Articles

error: