ಕರ್ನಾಟಕಪ್ರಮುಖ ಸುದ್ದಿ

ವಿಜಯಾ ಬ್ಯಾಂಕ್ ಹೆಸರು ಹೋದರೆ ದ.ಕ. ಜಿಲ್ಲೆಗೆ ಕರಾಳ ದಿನ: ಮಾಜಿ ಸಚಿವ ರಮಾನಾಥ ರೈ

ಮಂಗಳೂರು (ಜ.3): ದ.ಕ. ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕ್ ಆಗಿರುವ ವಿಜಯಾ ಬ್ಯಾಂಕನ್ನು ವಿಲೀನಗೊಳಿಸಿ ಬ್ಯಾಂಕ್ ಆಫ್ ಬರೋಡಾದ ಬ್ಯಾಂಕ್ ಎಂಬ ಬೋರ್ಡ್ ಬರುವ ದಿನ ಜಿಲ್ಲೆಯ ಪಾಲಿಗೆ ಕರಾಳ ದಿನವಾಗಲಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಮಂಗಳೂರಿನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಾ ಬ್ಯಾಂಕಿನ ಸ್ಥಾಪಕ ಸುಂದರ ರಾಮರ ಆಶೋತ್ತರಗಳ ಪಾಲಿಗೂ ಅದು ಕರಾಳವಾಗಲಿದೆ. ಕೇಂದ್ರ ಸರಕಾರದ ಈ ನಡೆಯ ಬಗ್ಗೆ ಈಗಾಗಲೇ ಪ್ರತಿಭಟನೆ ನಡೆಸಲಾಗಿದೆ. ಮುಂದೆ ದೊಡ್ಡ ಮಟ್ಟದ ಹೋರಾಟದ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತನೆ ನಡೆಸಲಾಗುವುದು ಎಂದು ರಮಾನಾಥ ರೈ ತಿಳಿಸಿದರು. (ಎನ್.ಬಿ)

Leave a Reply

comments

Related Articles

error: