ಸುದ್ದಿ ಸಂಕ್ಷಿಪ್ತ

‘ಗಿಫ್ಟ್ ಬಾಕ್ಸ್’ ಚಿತ್ರದ ಪೋಸ್ಟರ್ ಬಿಡುಗಡೆ ನಾಳೆ

ಮೈಸೂರು,ಜ.3 : ಹಳ್ಳಿಚಿತ್ರ ಪ್ರೋಡಕ್ಷನ್ ವತಿಯಿಂದ ಮೂಡುತ್ತಿರುವ ‘ಗಿಫ್ಟ್ ಬಾಕ್ಸ್’ ಚಿತ್ರದ ಪೋಸ್ಟರ್ ಬಿಡುಗಡೆಯನ್ನು ನಾಳೆ(4) ಸಂಜೆ 6 ಗಂಟೆಗೆ ವಿಜಯನಗರದ ನಾಲ್ಕನೇ ಹಂತದ ಕಲ್ಪಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ.

ಚಿತ್ರನಟ ಧನಂಜಯ, ನಿರ್ದೇಶಕ ಎನ್.ಎಸ್.ಶಂಕರ್, ಕಲಾವಿದ ಬಾದಲ್ ನಂಜುಂಡಸ್ವಾಮಿ, ವಿನ್ಯಾಸಕ ಗೌರೀಶ್ ಕಪನಿ ಇರಲಿದ್ದಾರೆ. ಸಿನಿಮಾಗಳಲ್ಲಿ ಬಿತ್ತಿ ಪತ್ರಗಳ ಪ್ರಾಮುಖ್ಯತೆ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: