ಮೈಸೂರು

ಅನಾಥ ಶವ ಪತ್ತೆ : ಮನವಿ

ಮೈಸೂರು,ಜ.3 : ವಾಣಿ ವಿಲಾಸ ವಾಟರ್ ವರ್ಕಸ್ ಬಳಿ ಅನಾರೋಗ್ಯದಿಂದ ನಿತ್ರಾಣವಾಗಿದ್ದ 60 ವರ್ಷದ ವಯಸ್ಸಿನ ಅನಾಮಧೇಯ ವ್ಯಕ್ತಿಯನ್ನು ಚಿಕಿತ್ಸೆಗೆಂದು ಕೆ.ಆರ್. ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಜ.1ರಂದು ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಗೆ ಅಂದಾಜು 60 ವರ್ಷ, ಎಣ್ಣೆಗೆಂಪು ಮೈ ಬಣ್ಣ, ಕೋಲು ಮುಖ, 5.5. ಅಡಿ ಎತ್ತರ, ಕೃಶವಾದ ಶರೀರ, ಕಪ್ಪು ಮಿಶ್ರಿತ ಬಿಳಿ ಕೊದಲು ಹೊಂದಿದ್ದಾರೆ. ಇವರ ವಾರಸುದಾರರು ಇದ್ದಲ್ಲಿ ವಿವಿ ಪುರಂ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ, ವಿವರಗಳಿಗೆ 0821 2418314, 2418514 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: