ಕ್ರೀಡೆ

ದ್ರಾವಿಡ್ ದಾಖಲೆ ಮುರಿದ ಚೇತೇಶ್ವರ ಪೂಜಾರ

ಸಿಡ್ನಿ,ಜ.4-ಟೀಂ ಇಂಡಿಯಾದ ಕಲಾತ್ಮಕ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ದಿ ವಾಲ್ ಖ್ಯಾತಿಯ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ದಾಖಲೆಯನ್ನು ಮುರಿದಿದ್ದಾರೆ.

ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ದ್ರಾವಿಡ್ ದಾಖಲೆಯೊಂದನ್ನು ಪೂಜಾರ ಮುರಿದಿದ್ದಾರೆ. ಪೂಜಾರ ಇದೀಗ ಆಸೀಸ್ ನೆಲದಲ್ಲಿ ಕಾಂಗರೂ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ದಾಖಲೆಗೆ ಪಾತ್ರವಾಗಿದ್ದಾರೆ.

ವಿದೇಶ ನೆಲದಲ್ಲಿ ಭಾರತೀಯ ಬ್ಯಾಟ್ಸ್ಮನ್ಗಳು ನಿರಂತರ ವೈಫಲ್ಯ ಎದುರಿಸುತ್ತಲೇ ಇದ್ದರು. ಕೆಲವೇ ಕೆಲವು ಬ್ಯಾಟ್ಸ್ಮನ್ಗಳು ಮಾತ್ರ ಯಶಸ್ವಿಯನ್ನು ಸಾಧಿಸಿದ್ದರು. ಇದೀಗ ದ್ರಾವಿಡ್ ಸಾಲಿಗೆ ಪೂಜಾರ ಸೇರಿಕೊಂಡಿದ್ದಾರೆ. ಅಂದ ಹಾಗೆ ಮೂರನೇ ಬಾರಿಗೆ ಪೂಜಾರ ವಿದೇಶದಲ್ಲಿ ಇನ್ನಿಂಗ್ಸ್ವೊಂದರಲ್ಲಿ 150ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

ಪೈಕಿ ಆಸೀಸ್ ನೆಲದಲ್ಲಿ ಚೊಚ್ಚಲ ಶತಕೋತ್ತರ ಶತಕಾರ್ಧದ ಸಾಧನೆ ಮಾಡಿದ್ದಾರೆ. ಮೂಲಕ ಆಸೀಸ್ ನೆಲದಲ್ಲಿ ಇನ್ನಿಂಗ್ಸ್ವೊಂದರಲ್ಲಿ 150ಕ್ಕೂ ಹೆಚ್ಚು ರನ್ ಗಳಿಸಿದ ಒಂಬತ್ತನೇ ಭಾರತೀಯ ಬ್ಯಾಟ್ಸ್ಮನ್ ಎಂದೆನಿಸಿಕೊಂಡಿದ್ದಾರೆ.

ಪ್ರಸ್ತುತ ಆಸ್ಟ್ರೇಲಿಯಾ ಸರಣಿಯಲ್ಲಿ ಪೂಜಾರ ಫಾರ್ಮ್ ತುತ್ತ ತುದಿಯಲ್ಲಿದ್ದು, ಈಗಾಗಲೇ ಮೂರು ಶತಕಗಳನ್ನು ಬಾರಿಸಿದ್ದು, 500ಕ್ಕೂ ಹೆಚ್ಚು ರನ್ ಕಲೆ ಹಾಕಿದ್ದಾರೆ.

ಆಸೀಸ್ ನೆಲದಲ್ಲಿ ಟೆಸ್ಟ್ ಸರಣಿಯಲ್ಲಿ 1000ಕ್ಕೂ ಹೆಚ್ಚು ಎಸೆತಗಳನ್ನು ಎದುರಿಸಿದ ಭಾರತೀಯ ಬ್ಯಾಟ್ಸ್ಮನ್ಗಳು:

ಚೇತೇಶ್ವರ ಪೂಜಾರ: (1204* ಎಸೆತ, 2018-19), ರಾಹುಲ್ ದ್ರಾವಿಡ್ (1203 ಎಸೆತ, 2003/04), ವಿಜಯ್ ಹಜಾರೆ (1,192 ಎಸೆತ, 1947-48), ವಿರಾಟ್ ಕೊಹ್ಲಿ (1,093 ಎಸೆತ, 2014-15), ಸುನಿಲ್ ಗವಾಸ್ಕರ್ (1,032 ಎಸೆತ, 1977-78). (ಎಂ.ಎನ್)

Leave a Reply

comments

Related Articles

error: