ಮೈಸೂರು

ರಾಜಕಾಲುವೆ ಪರಿಶೀಲನೆ ನಡೆಸಿದ ಮೇಯರ್

ಮಹಾನಗರಪಾಲಿಕೆ 35ನೇ ವಾರ್ಡ್ ನ ಜೆಕೆ ಗ್ರೌಂಡ್ ಬಳಿ ನಡೆಯುತ್ತಿರುವ ರಾಜಕಾಲುವೆ ಕಾಮಗಾರಿಯನ್ನು ಮೇಯರ್ ಬಿ.ಎಲ್.ಭೈರಪ್ಪ ಪಾಲಿಕೆ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ನಡೆಸಿದರು.

ಮಹಾನಗರಪಾಲಿಕೆ ಮತ್ತು ಶಾಸಕ ವಾಸು ಅವರ 1.75 ಕೋಟಿ ರೂಪಾಯಿ ವಿಶೇಷ ಅನುದಾನದಡಿ ಕಾಮಗಾರಿ ನಡೆಯುತ್ತಿದೆ. ಈ ಸಂದರ್ಭ ಮಾತನಾಡಿದ ಮೇಯರ್ ಕೇವಲ ಬೆಂಗಳೂರಿನಲ್ಲಿ ಮಾತ್ರ ರಾಜಕಾಲುವೆ ಒತ್ತುವರಿ ಮಾಡಲಾಗಿಲ್ಲ. ಕೆಲವು ಪ್ರಮುಖ ಪಟ್ಟಣಗಳಲ್ಲಿಯೂ ಈ ರೀತಿ ಒತ್ತುವರಿ ನಡೆದಿದೆ ಎಂದರು. ಮೈಸೂರು ಮೆಡಿಕಲ್ ಕಾಲೇಜು ಮತ್ತು ಗಣೇಶ್ ಪೆಟ್ರೋಲ್ ಬಂಕ್ ನಲ್ಲಿ ಒತ್ತುವರಿ ನಡೆದಿದೆ. ಒತ್ತುವರಿ ನಡೆದ ಜಾಗವನ್ನು ಶೀಘ್ರದಲ್ಲಿಯೇ ತೆರವುಗೊಳಿಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಜಕಾಲುವೆ ಒತ್ತುವರಿ ಪ್ರಮುಖ ನಗರಗಳಲ್ಲಿ ನಡೆಯುತ್ತಿದೆ. ಯಾರು ಕಾನೂನು ಬಾಹಿರವಾಗಿ ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಳ್ಳಲು ಯತ್ನಿಸುತ್ತಾರೋ ಅಂಥಹವರ ವಿರುದ್ಧ ಕ್ರಮ ಜರುಗಿಸಲಾಗುವುದು. ಮೈಸೂರನ್ನು ಸುರಕ್ಷಿತ ಹಾಗೂ ಸ್ನೇಹಿ ನಗರವನ್ನಾಗಿಸಲು ಯತ್ನಿಸಲಾಗುತ್ತಿದೆ ಎಂದರು.

 

Leave a Reply

comments

Related Articles

error: