ದೇಶಪ್ರಮುಖ ಸುದ್ದಿ

ಕ್ರಿಕೆಟ್ ದೇವರೆನಿಸಿಕೊಂಡಿರುವ ಸಚಿನ್‍ಗೆ ಕಪಾಳ ಮೋಕ್ಷ ಮಾಡಿದ್ದರು ಅಚ್ರೇಕರ್!

ಮುಂಬೈ (ಜ.4): ಭಾರತದಲ್ಲಿ ಕ್ರಿಕೆಟ್ ಧರ್ಮವೆಂದರೆ ಅದಕ್ಕೆ ದೇವರಾಗಿ ಸಚಿನ್ ತೆಂಡೂಲ್ಕರ್ ಕಾಣಿಸುತ್ತಾರೆ. ಆದರೆ ಈ ಪ್ರತಿಭೆಯನ್ನು ಗುರುತಿಸಿದ್ದು ಮಾತ್ರ ಅವರ ಕೋಚ್ ರಮಾಕಾಂತ್ ಅಚ್ರೇಕರ್. 87 ವರ್ಷದ‌ ರಮಾಕಾಂತ್ ಅಚ್ರೇಕರ್ ಬುಧವಾರ ಕೊನೆಯುಸಿರು ಎಳೆದಿದ್ದಾರೆ. ಸಚಿನ್ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಮಾಕಾಂತ್, ಅವರ ಬಗ್ಗೆ ಸಚಿನ್ ನೆನಪಿಸಿಕೊಳ್ಳುವಾಗ ಒಮ್ಮೆ ಕಪಾಳಮೋಕ್ಷ ಮಾಡಿದ್ದರ ಬಗ್ಗೆ ಮಾತನಾಡಿದ್ದಾರೆ.

ಶಾಲಾ ದಿನದಲ್ಲೊಮ್ಮೆ ಸಚಿನ್ ಅಭ್ಯಾಸ ಮಾಡುವುದನ್ನು ಬಿಟ್ಟು ತನ್ನ ಕ್ಲಬ್‌ ನ ಹಿರಿಯರ ತಂಡದ ಪಂದ್ಯ ವೀಕ್ಷಿಸಲು,‌ ಶಾಲೆ ಮುಗಿದ ಬಳಿಕ ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿ ಚಿಯರ್ಸ್ ಮಾಡಲು ಬಂದಿದ್ದಕ್ಕೆ ಜೋರಾಗಿ ಕಪಾಳಕ್ಕೆ ಬಾರಿಸಿದ್ದರು ಎಂದು ಸಚಿನ್ ‌ನೆನಪಿಸಿಕೊಂಡಿದ್ದಾರೆ. ಈ ವೇಳೆ ಅಚ್ರೇಕರ್ ಅವರು, ನೀನು ಇನ್ನೊಬ್ಬರಿಗೆ ಚಿಯರ್ಸ್ ಮಾಡಲು ಬರಬೇಡ. ಇನ್ನೊಬ್ಬರು ನಿನ್ನ ಆಟ ನೋಡಲು ಬರುವಂತೆ ಮಾಡಿಕೊಳ್ಳಬೇಕು ಎಂದಿದ್ದರು ಎಂದು ಸಚಿನ್ ಆ ಕ್ಷಣವನ್ನು ಸ್ಮರಿಸಿಕೊಂಡಿದ್ದಾರೆ. (ಎನ್.ಬಿ)

Leave a Reply

comments

Related Articles

error: