ಪ್ರಮುಖ ಸುದ್ದಿಮೈಸೂರು

ಜ.13ರಂದು ನಮೋ ಭಾರತ್ ವತಿಯಿಂದ ‘ರನ್ ಫಾರ್ ನರೇಂದ್ರ’

ಮೈಸೂರು,ಜ.4 : ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಗಳ ‘ನಮೋ ಭಾರತ್’ ವತಿಯಿಂದ ರನ್ ಫಾರ್ ನರೇಂದ್ರ ಎಂಬ ಕಾರ್ಯಕ್ರಮವನ್ನು ಜ.13ರಂದು ಏರ್ಪಡಿಸಲಾಗಿದೆ ಎಂದು ನಮೋ ಭಾರತ್ ಸಂಚಾಲಕ ಯಶವಂತ ತಿಳಿಸಿದರು.

ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸ್ವಾಮಿವಿವೇಕಾನಂದರ ಜಯಂತಿ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅಂದು ಬೆಳಗ್ಗೆ 7 ಗಂಟೆಗೆ ಮೈಸೂರು ಆಕಾಶವಾಣಿ ಬಳಿಯಿರುವ ಸ್ವಾಮಿ ವಿವೇಕಾನಂದರ ಪುತ್ಥಳಿ ಬಳಿಯಿಂದ ಆರಂಭವಾಗುವ ಓಟವು ಒಂಟಿಕೊಪ್ಪಲು, ಮಾತೃಮಂಡಳಿ ವೃತ್ತ ಸೇರಿದಂತೆ ನಂತರ ಪುತ್ಥಳಿ ಬಳಿಯೇ ಅಂತ್ಯಗೊಳ್ಳಲಿದೆ ಎಂದು ತಿಳಿಸಿದರು.

ಸ್ವಾಮಿವಿವೇಕಾನಂದರು ಅಂದು ವಿಶ್ವದಲ್ಲಿ ಭಾರತದ ಗೌರವ, ಸಂಸ್ಕೃತಿ, ಭಾರತೀಯತೆಯನ್ನು ಎತ್ತಿ ಹಿಡಿದ ವೀರ ಸನ್ಯಾಸಿಯಾಗಿದ್ದು, ಅದರಂತೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ದೇಶದ ಘನತೆ ಗೌರವನ್ನು ವಿಶ್ವದೆಲ್ಲೆಡೆ ಪಸರಿಸಿ ದೇಶದ ಸರ್ವತೋಮುಖ ಅಭಿವೃದ್ಧಿಯ ಕೆಲಸ ಮಾಡಿದ್ದು, ಆ ನರೇಂದ್ರರ ನೆನಪಿನಲ್ಲಿ  ಇಂದು ಈ ನರೇಂದ್ರರನ್ನು ಬೆಂಬಲಿಸುವುದಕ್ಕೆ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದೆರು.

ಸಂಚಾಲಕರಾದ ಬಿ.ಎಸ್.ಆನಂದ್, ಹರೀಶ್ ಬಾಬು, ಚೇತನ್ ರಾವ್, ಶಿವಪ್ರಸಾದ್ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: