ಮೈಸೂರು

ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

ವಿವೇಕಾನಂದರ ಚಿಂತನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೃತ ಯುವಕನನ್ನು ಜೆ.ಪಿ.ನಗರ ನಿವಾಸಿ ಬಾಬು (22)  ಎಂದು ಗುರುತಿಸಲಾಗಿದೆ. ಈತ ಆರೆಸ್ಸೆಸ್ ನಲ್ಲೂ ಸಕ್ರಿಯನಾಗಿದ್ದು,  ವಿವೇಕಾನಂದರ ಚಿಂತನೆಗಳಿಂದ ಪ್ರಭಾವಿತನಾಗಿದ್ದ ಎನ್ನಲಾಗಿದೆ.
ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಈ ದೇಹ ನಶ್ವರ, ವಿವೇಕಾನಂದರಂತೆ ನಾನು ನನ್ನ ದೇಹವನ್ನು ತ್ಯಜಿಸುತ್ತಿದ್ದೇನೆ. ಮರಣಾನಂತರ ಚಾಮುಂಡೇಶ್ವರಿ  ದೇವಿಯ ತೀರ್ಥವನ್ನು ನನ್ನ ದೇಹಕ್ಕೆ ಪ್ರೋಕ್ಷಣೆ ಮಾಡಬೇಕು. ದೇಹಕ್ಕೆ ಕೇಸರಿ ಬಟ್ಟೆ ಹೊದಿಸಿ ಅಂತ್ಯಕ್ರಿಯೆ ನಡೆಸಿ. ದೇಹ ದಹಿಸಿದ ನಂತರ ಚಿತಾಭಸ್ಮವನ್ನು ಕನ್ಯಾಕುಮಾರಿಯಲ್ಲಿ ವಿಸರ್ಜಿಸಿ ಎಂದು ಬರೆಯಲಾಗಿದೆ. ಈತ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆವ್ಯಕ್ತವಾಗಿದ್ದು, ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: