ಮೈಸೂರು

ಗಿಳಿಯಿಂದ ಆ್ಯಪ್ ಕುರಿತು ಪ್ರಚಾರ..!

ಮೈಸೂರು,ಜ.4:- ಗಿಳಿಯೊಂದು ಆ್ಯಪ್ ಕುರಿತು ಪ್ರಚಾರ ನಡೆಸುತ್ತಿದೆ. ಆಶ್ಚರ್ಯವಾಗುತ್ತಿದೆಯಾ? ಅಚ್ಚರಿಯಾದರೂ ಇದು ಸತ್ಯ. ಮೈಸೂರಿನಲ್ಲೊಂದು ಗಿಳಿ ಆ್ಯಪ್ ಕುರಿತು ಪ್ರಚಾರ ಮಾಡುತ್ತಿದೆ.

ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಮುದ್ದು ಗಿಳಿ ಮೈಸೂರಿನ ಆಶ್ರಮದ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಹೇಳುತ್ತಿದೆ. ‘ಸ್ವತಜ’ ಎಂಬ ಗಿಳಿಯೇ  ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಮನವಿ ಮಾಡುತ್ತಿದೆ. ಪ್ಲೀಸ್ ಡೌನ್‌ಲೋಡ್ ಎಸ್ ಜಿಎಸ್ ಪೋಸ್ಟ್  ಎನ್ನುತ್ತಿದ್ದು, ಆಶ್ರಮಕ್ಕೆ ಆಗಮಿಸುವ ದೇಶ-ವಿದೇಶಿಗರಿಂದ ಆ್ಯಪ್ ಡೌನ್‌ಲೋಡ್ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದೆ. ಗಿಳಿಯ ಹೇಳಿಕೆ ಕಂಡು ಆಶ್ರಮ ವಾಸಿಗಳು,ಪ್ರವಾಸಿಗರು ನಿಬ್ಬೆರಗಾಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: