ಪ್ರಮುಖ ಸುದ್ದಿ

ಈ ವರ್ಷದ ಸೆಪ್ಟೆಂಬರ್ ನಲ್ಲಿ ಮೊದಲ ರಾಫೆಲ್ ವಿಮಾನ : ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

ದೇಶ(ನವದೆಹಲಿ)ಜ.4:- ರಾಫೆಲ್ ವಿಷಯದ ಕುರಿತು ಲೋಕಸಭೆಯಲ್ಲಿನ್ನೂ ಚರ್ಚೆಗಳು ನಡೆಯುತ್ತಲೇ ಇವೆ. ಅಧಿಕಾರದಲ್ಲಿರುವ ಪಕ್ಷ ಮತ್ತು ವಿರೋಧಪಕ್ಷಗಳು ತಮ್ಮ ತಮ್ಮ ವಾಕ್ ದಾಳಿಯನ್ನು ಮುಂದುವರಿಸಿದ್ದಾರೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ನಡೆದ ಚರ್ಚೆಗೆ ಉತ್ತರಿಸಿ ನಮ್ಮ ನೆರೆಯ ದೇಶಗಳು ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಆದರೆ ಭಾರತದಲ್ಲಿ ನಮ್ಮೊಳಗೇ ನಾವು ಜಗಳ ಮಾಡುತ್ತಿದ್ದೇವೆ. ರಾಫೆಲ್ ಕುರಿತು ಹಿಂದಿನ ಯುಪಿಎ ಸರ್ಕಾರ ಏನೂ ಮಾಡಿರಲಿಲ್ಲ ಎಂದರು.

ಈ ವರ್ಷದ ಸೆಪ್ಟೆಂಬರ್ ನಲ್ಲಿ ಮೊದಲ ರಾಫೆಲ್ ವಿಮಾನವು ದೊರಕಲಿದೆ. ಇದರ ನಂತರ 36ಕ್ಕೂ ಅಧಿಕ ವಿಮಾನಗಳು 2020ರ ವೇಳೆಗೆ ಸಿಗಲಿದೆ ಎಂದು ತಿಳಿಸಿದರು. ಯುಪಿಎ ವಿರುದ್ಧ ವಾಗ್ದಾಳಿ ನಡೆಸಿದ ಅವರು ಈ ರೀತಿ ಒಂದು ಕಾರ್ಯವಾಗಲಿ ಎಂದು ಯುಪಿಎ ಯಾವತ್ತೂ ಬಯಸಿರಲಿಲ್ಲ.  ಇದೇ ವೇಳೆ ಬಿಜೆಪಿ ನಾಯಕ ಅನುರಾಗ್ ಠಾಕೂರ್ ಮಾತನಾಡಿ 95 ನಿಮಿಷದ ಸಂದರ್ಶನದಲ್ಲಿ ಪ್ರಧಾನಿ ಮೋದಿಯವರು ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಮಹಿಳಾ ಪತ್ರಕರ್ತೆಯಿಂದ ರಾಹುಲ್ ಗಾಂಧಿಯವರು ಏನು ನಿರೀಕ್ಷಿಸದ್ದರು. ನೀವು ಏನನ್ನು ತಿನ್ನಲು ಇಷ್ಟಪಡುತ್ತೀರಿ? ನಿಮ್ಮ ಶ್ವಾನ ಇತ್ಯಾದಿಗಳು ಹೇಗಿವೆ? ಇತ್ಯಾದಿ ಪ್ರಶ್ನೆಗಳನ್ನು ಬಯಸಿ  ರಾಹುಲ್ ಗಾಂಧಿಯವರು ಮಹಿಳಾ ಪತ್ರಕರ್ತೆಯ ಕುರಿತು ಪ್ರಶ್ನಿಸಿದ್ದು, ಖಂಡನೀಯ ಎಂದರು. (ಎಸ್.ಎಚ್)

Leave a Reply

comments

Related Articles

error: