ಸುದ್ದಿ ಸಂಕ್ಷಿಪ್ತ

ಅಭಿನಂದನಾ ಸಮಾರಂಭ ನಾಳೆ

ಮೈಸೂರು,ಜ.4 : ಅಖಿಲ ಕರ್ನಾಟಕ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಹಿತರಕ್ಷಣಾ ಸಂಘದಿಂದ ಕ್ಯಾಲೆಂಡರ್ ಬಿಡುಗಡೆ ಹಾಗೂ ಉಪನ್ಯಾಸಕರ ಹುದ್ದೆಯಿಂದ ಪದೋನ್ನತಿ ಹೊಂದಿದೆ ನೂತನ ಪ್ರಾಂಶುಪಾಲರ ಅಭಿನಂದನಾ ಸಮಾರಂಭವನ್ನು ನಾಳೆ (5) ಸಂಜೆ4 ಗಂಟೆಗೆ ಮಹಾರಾಣಿ ಸ.ಪ.ಪೂ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಮುಖ್ಯ ಅತಿಥಿಯಾಗಿ ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಪ.ಪೂ.ಶಿ ಇಲಾಖೆ ಉಪನಿರ್ದೇಶಕ ಡಾ.ದಯಾನಂದ ಅಧ್ಯಕ್ಷತೆ ವಹಿಸುವರು, ಪ.ಪೂ.ಶಿ.ಇ. ವಿಶ್ರಾಂತ ಉಪನಿರ್ದೇಶಕ ಕೆ.ಎಂ.ಪುಟ್ಟುರವರು ಕ್ಯಾಲೆಂಡರ್ ಬಿಡುಗಡೆಗೊಳಿಸಲಿದ್ದು ಹಲವಾರು ಗಣ್ಯರು ಹಾಜರಿರುವರು. (ಕೆ.ಎಂ.ಆರ್)

Leave a Reply

comments

Related Articles

error: