ಸುದ್ದಿ ಸಂಕ್ಷಿಪ್ತ

ವಿಜ್ಞಾನ ಮತ್ತು ಗಣಿತ ಸಂವಾದ ನಾಳೆ

ಮೈಸೂರು,ಜ.4 : ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ವಿಜ್ಞಾನಾಸಕ್ತಿ ಮೂಡಿಸುವ ನಿಟ್ಟಿನಲ್ಲಿ ಮೈಸೂರು ವಿವಿ ವತಿಯಿಂದ ಸ್ಥಾಪಿತಗೊಂಡಿರುವ ಶಾಲೆಗಳಲ್ಲಿ ವಿಜ್ಞಾನ ಅಭಿವೃದ್ಧಿ ಸಮಿತಿಯ ಪ್ರತಿ ತಿಂಗಳ ಮೊದಲನೆ ಶನಿವಾರದಂದು ವಿಜ್ಞಾನ ಮತ್ತು ಗಣಿತ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.

ಅದರಂಗವಾಗಿ ಜ.5ರಮದು ಮಧ್ಯಾಹ್ನ 2 ಗಂಟೆಯಿಂದ 4ರವರೆಗೆ ಮಾನಸಗಂಗೋತ್ರಿಯ ವಿಜ್ಞಾನಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಗೋಪಾಲರಾವ್, ಪ್ರೊ.ರವೀಶ್, ಪ್ರಾಧ್ಯಾಪಕರಾದ ಪ್ರೊ.ಕೆ.ಎಸ್.ಮಲ್ಲೇಶ್, ಪ್ರೊ.ವಿಶ್ವನಾಥ್, ಪ್ರೊ.ಜನಾರ್ದನ್, ಪ್ರೊ.ರಮೇಶ್, ಡಾ.ರಂಗರಾಜನ್, ನಿವೃತ್ತ ವಿಜ್ಞಾನಿ ಡಾ.ಭಾಗ್ಯಲಕ್ಷ್ಮಿ ಮೊದಲಾದವರು ಭಾಗಿಯಾಗಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: