ಮೈಸೂರು

ಜ.6ರಂದು ಜ್ಯೋತಿಷ್ಯ ಸಮ್ಮೇಳನ

ಮೈಸೂರು,ಜ.4 : ನಗರದ ಶ್ರೀಮಾಯಕಾರ ಗುರುಕುಲದ ವತಿಯಿಂದ ‘2ನೇ ವೇದಾಂಗ ಜ್ಯೋತಿಷ್ಯ ಸಮ್ಮೇಳನ 2019’ ಕೆಎಸ್ಓಯುನ ಕಾವೇರಿ ಸಭಾಂಗಣದಲ್ಲಿ ಜ.6ರಂದು ಏರ್ಪಡಿಸಲಾಗಿದೆ.

ಬೆಳಗ್ಗೆ 9 ರಿಂದ ಆರಂಭವಾಗಲಿರುವ ಸಮ್ಮೇಳನವನ್ನು ಕರ್ನಾಟಕ ಸಂಸ್ಕೃತ ವಿವಿಯ ಉಪಕುಲಸಚಿವ ವಿದ್ವಾನ್ ಪ್ರಕಾಶ್ ಪಾಗೋಜಿ ಉದ್ಘಾಟಿಸಲಿದ್ದಾರೆ. ಶ್ರೀರಂಗಪಟ್ಟಣದ ಶಾಶ್ವತಿ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಡಾ.ಭಾನುಪ್ರಕಾಶ್ ಶರ್ಮ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ.

ಸುತ್ತೂರು ಶಿವರಾತ್ರೀಶ್ವರ ಪಂಚಾಂಗ ಕರ್ತರಾದ ಡಾ.ಕೆ.ವಿ.ಪುಟ್ಟಹೊನ್ನಯ್ಯ ಅಧ್ಯಕ್ಷತೆ ವಹಿಸುವರು. ಮಾಯಕಾರ ಗುರುಕುಲ ಸಂಸ್ಥಾಪಕ ಮೂಗೂರು ಮಧುದೀಕ್ಷಿತ್ ಪ್ರಾಸ್ತಾವಿಕೆ ಮಾತನಾಡಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: