ಮೈಸೂರು

ಪ್ರೌಢಶಾಲಾ ಮುಖ್ಯ ಶಿಕ್ಷಕರ ಜೊತೆ ಸಂವಾದ : ವಿದ್ಯಾರ್ಥಿಗಳು ಉತ್ತೀರ್ಣರಾಗಲು ಅಗತ್ಯ ಕಾರ್ಯಕ್ರಮಗಳ ಕುರಿತು ಪ್ರಶ್ನಿಸಿದ ಶಾಸಕ ಎಸ್.ಎ.ರಾಮದಾಸ್

ಮೈಸೂರು,ಜ.4:- ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ  ಎಸ್.ಎ.ರಾಮದಾಸ್  ಅವರಿಂದ ಮೈಸೂರು ದಕ್ಷಿಣವಲಯ ವ್ಯಾಪ್ತಿಯ ಪ್ರೌಢಶಾಲಾ ಮುಖ್ಯ ಶಿಕ್ಷಕರ ಜೊತೆ ಸಂವಾದ ಕಾರ್ಯಕ್ರಮವನ್ನು  ನಿನ್ನೆ ಕಾವೇರಿ ಶಾಲೆ ಕುವೆಂಪುನಗರ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.

ಬಳಿಕ ಸಂವಾದ ನಡೆಸಿದ ಶಾಸಕರು ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಜಿಲ್ಲೆಯು ಹಿಂದುಳಿಯಲು ಕಾರಣಗಳೇನು ಎನ್ನುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ, ಎಲ್ಲಾ ಮಕ್ಕಳೂ ಉತ್ತೀರ್ಣರಾಗಲಿಕ್ಕೆ ಏನೇನು ಕಾರ್ಯಕ್ರಮಗಳು ಅಗತ್ಯ ಎಂದು ಪ್ರಶ್ನಿಸಿದರು. ಆಗ ಮುಖ್ಯ ಶಿಕ್ಷಕರುಗಳು ಕೆ ಅನಿಸಿಕೆ ವ್ಯಕ್ತ ಪಡಿಸಿದರು.

ಪಾಸಿಂಗ್ ಪ್ಯಾಕೇಜ್ – ಅನುತ್ತೀರ್ಣರಾಗಬಹುದಾದ ಮಕ್ಕಳಿಗೆ ಮಾರ್ಗದರ್ಶನಕ್ಕೆ ಪಾಸಿಂಗ್  ಪ್ಯಾಕೇಜ್ ನೀಡಿದರೆ ಸಹಾಯವಾಗುತ್ತದೆ ಎಂದು ತಿಳಿಸಿದರು.  ಅದಕ್ಕೆ ಶಾಸಕರು ಪಾಸಿಂಗ್ ಪ್ಯಾಕೇಜ್‍ನ್ನು ಪ್ರಿಂಟ್ ಮಾಡಿಸಿ ಅಗತ್ಯವಿರುವ ಮಕ್ಕಳಿಗೆ ವಿತರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಯಾವ ಶಾಲೆಯಲ್ಲಿ ಉತ್ತೀರ್ಣರಾಗಲಿಕ್ಕೆ ಸಾಧ್ಯವೇ ಇಲ್ಲ ಎನ್ನುವ ಮಕ್ಕಳಿದ್ದಾರೆ ಎಂದು ಕೇಳಿದರು.  ಅದಕ್ಕೆ ಮಹಾರಾಜ ಪ್ರೌಢಶಾಲೆ, ಮಹಾರಾಣಿ ಪ್ರೌಢಶಾಲೆ, ಅಶೋಕಪುರಂ ಸರ್ಕಾರಿ ಪ್ರೌಢಶಾಲೆ ಹಾಗೂ ಅಶೋಕ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ತಮ್ಮ ತಮ್ಮ ಶಾಲೆಯಲ್ಲಿ ಅಂತಹ ಎಷ್ಟು ಮಕ್ಕಳಿದ್ದಾರೆ ಹಾಗೂ ಅದಕ್ಕೆ ಕಾರಣಗಳೇನು ಎಂದು ವಿವರಿಸಿದರು.

ಗೈರುಹಾಜರಾಗುವ ವಿದ್ಯಾರ್ಥಿಗಳ ಪೋಷಕರ ಮನವೊಲಿಸುವುದು, ಹಾಗೂ ಕಲಿಕೆಯಲ್ಲಿ ತೀರಾ ಹಿಂದುಳಿದ ವಿದ್ಯಾರ್ಥಿಗಳಿಗೆ ಕನಿಷ್ಠ ಉತ್ತೀರ್ಣರಾಗಲು ಬೇಕಾದ ಕಾರ್ಯಕ್ರಮಗಳನ್ನು ಸಮಾರೋಪಾದಿಯಲ್ಲಿ ಹಾಗೂ unarmed combat ನಂತೆ ತಕ್ಷಣಕ್ಕೆ ವಿದ್ಯಾರ್ಥಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಬೇಕಾದ ಅಗತ್ಯಗಳನ್ನು ಪೂರೈಸಲು ಇಂತಹ ಮಕ್ಕಳ ಪಟ್ಟಿಯನ್ನು ನೀಡಲು ಅಧಿಕಾರಿಗಳಿಗೆ ತಿಳಿಸಿದರು.  ಶಾಲೆಗೆ ಸರಿಯಾಗಿ ಹಾಜರಾಗದಿರುವ ಮಕ್ಕಳ ವರದಿಯನ್ನು ತೆಗೆದುಕೊಂಡು ಪೋಷಕರು ಹಾಗೂ ಮಕ್ಕಳನ್ನು ಕರೆದು ವಿಚಾರಿಸಿ ಅವರಿಗೆ ಮಕ್ಕಳು ಉತೀರ್ಣರಾಗಲು ಬೇಕಾದ ಎಲ್ಲಾ ಅಗತ್ಯತೆಯನ್ನು ಪೂರೈಸುವುದರ ಜೊತೆಗೆ ನಿವೃತ್ತ ಶಿಕ್ಷಕರಿಗೆ ಮಕ್ಕಳನ್ನು ದತ್ತು ಕೊಟ್ಟು ಅವರ ಸಂಪೂರ್ಣ ಜವಾಬ್ದಾರಿಯನ್ನು ನೀಡಿ ಅವರು ಉತೀರ್ಣರಾಗಲು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಒಟ್ಟಾರೆ ಎಲ್ಲರೂ ಸೇರಿ ಉತ್ತಮವಾಗಿ ಕಾರ್ಯವನ್ನು ನಿರ್ವಹಿಸಿ ಮಕ್ಕಳ ಪ್ರಗತಿಗೆ ಕನಿಷ್ಠ ಮಟ್ಟಿಗಾದರೂ ಸೇವೆ ಸಲ್ಲಿಸಿ ಅವರ ಏಳಿಗೆಗೆ ಪಾತ್ರರಾದರೆ ನಮ್ಮೆಲ್ಲರ ಶ್ರಮ ಸಾರ್ಥಕವಾಗುತ್ತದೆ ಆ ನಿಟ್ಟಿನಲ್ಲಿ ಎಲ್ಲರೂ ಯಾವುದೇ ಕುಂದು ಇಲ್ಲದ್ದಂತೆ ಕಾರ್ಯನಿರ್ವಹಿಸೋಣ ಎಂದು ಉತ್ಸಾಹಭರಿತ ಮಾತುಗಳನ್ನಾಡಿ ಎಲ್ಲರನ್ನು ಪ್ರೇರೇಪಿಸಿದರು.

ನಂತರ ಮಾತನಾಡಿದ ಜಿ.ಎಸ್.ಎಸ್. ಸಂಸ್ಥೆಯ ಸ್ಥಾಪಕ ಶ್ರೀಹರಿ  ಗಿಡ ಒಣಗಿದರೆ ಬುಡಕ್ಕೆ ನೀರು ಹಾಕಬೇಕೇ ಹೊರತು ಎಲೆಗಳಿಗೆ ಹಾಕಿದರೆ ಪ್ರಯೋಜನವಿಲ್ಲ.  ಆದ್ದರಿಂದ ಕಲಿಕೆಯಲ್ಲಿ ಹಿಂದುಳಿದ ಮತ್ತು ಓದಿ ಬರೆಯಲು ಕಷ್ಟ ಪಡುವ ಮಕ್ಕಳ ಸಮಸ್ಯೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಅವರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ತಿಳಿಸಿದರು. ತಮಗೆ ವಾರದಲ್ಲಿ ಎರಡು-ಮೂರು ತರಗತಿಗಳನ್ನು ಆಯೋಜನೆ ಮಾಡಿಕೊಟ್ಟರೆ ಅಂತಹ ಮಕ್ಕಳು ಕನಿಷ್ಟ ಉತ್ತೀರ್ಣರಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದರು.

ಈ ಸಂದರ್ಭ ಸೇಪ್ ವ್ಹೀಲ್ ಸ್ಥಾಪಕಾಧ್ಯಕ್ಷ ಬಿ.ಎಸ್.ಪ್ರಶಾಂತ,  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಿವಕುಮಾರ್  ಮತ್ತಿತರರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: