ಕರ್ನಾಟಕಮೈಸೂರು

ಸೆಪ್ಟೆಂಬರ್ 21: ತಳಿರು ಪತ್ರಿಕೆ ಉಗಾದಿ ಕೃತಿ ಬಿಡುಗಡೆ

ಮೈಸೂರು ವಿಶ್ವವಿದ್ಯಾನಿಲಯ ಕನ್ನಡ ಸಂಘ, ಮಹಾರಾಜ ಕಾಲೇಜು ಕನ್ನಡ ವಿಭಾಗ ಮೈಸೂರು ಇದರ 2016-17ನೇ ಸಾಲಿನ ಚಟುವಟಿಕೆಗಳ ಉದ್ಘಾಟನೆ ತಳಿರು ಪತ್ರಿಕೆ ಮತ್ತು ಉಗಾದಿ ಕೃತಿ ಬಿಡುಗಡೆ ಸಮಾರಂಬವು ಸೆಪ್ಟೆಂಬರ್ 21ರಂದು ಬೆಳಿಗ್ಗೆ 10.30ಕ್ಕೆ ಮಹಾರಾಜ ಕಾಲೇಜಿನ ಜೂನಿಯರ್ ಬಿ.ಎ. ಹಾಲ್ ನಲ್ಲಿ ನಡೆಯಲಿದೆ.

ಉದ್ಘಾಟನೆ ಮತ್ತು ತಳಿರು ಪತ್ರಿಕೆ ಬಿಡುಗಡೆಯನ್ನು ಮಹಾರಾಜ ಕಾಲೇಜಿನ ಆಡಳಿತಾಧಿಕಾರಿ ಪ್ರೊ.ವಸಂತ ನೆರವೇರಿಸಲಿದ್ದಾರೆ. ಮಾನಸಗಂಗೋತ್ರಿಯ ಪ್ರಾಧ್ಯಾಪಕಿ ಡಾ.ಎಸ್.ಡಿ.ಶಶಿಕಲಾ ಕೃತಿ ಬಿಡುಗಡೆಗೊಳಿಸಲಿದ್ದು, ಮಂಡ್ಯದ ಸರ್.ಎಂ.ವಿ.ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ಡಾ.ಎಚ್.ಟಿ.ವೆಂಕಟೇಶಮೂರ್ತಿ ಕೃತಿ ಕುರಿತು ಮಾತನಾಡಲಿದ್ದಾರೆ. ಮಹಾರಾಜ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ನಾಗರಾಜಮೂರ್ತಿ ಅಧ್ಯಕ್ಷತೆಯನ್ನು ವಹಿಸಲಿದ್ದು, ಕನ್ನಡ ಸಂಘದ ಅಧ್ಯಕ್ಷೆ ಡಾ.ಡಿ.ವಿಜಯಲಕ್ಷ್ಮಿ, ಕೃತಿಯ ಕರ್ತೃ ಡಾ.ಕೆ.ತಿಮ್ಮಯ್ಯ, ಕನ್ನಡ ಸಂಘದ ಸಂಚಾಲಕ ಡಾ.ಟಿ.ಕೆ.ಕೆಂಪೇಗೌಡ,  ತಳಿರು ಪತ್ರಿಕೆ ಸಂಪಾದಕಿ ಡಾ.ಬಿ.ಪಿ.ಆಶಾಕುಮಾರಿ, ಸಂಪಾದಕ ಡಾ.ಎಂ.ಬಿ.ಸುರೇಶ್ ಉಪಸ್ಥಿತರಿರುತ್ತಾರೆ.

Leave a Reply

comments

Related Articles

error: