ಮೈಸೂರು

ಮೊಬೈಲ್ ಕಸಿದು ಪರಾರಿ

ಮೈಸೂರು,ಜ.5:- ಹಾಡಹಗಲೇ ವಿದ್ಯಾರ್ಥಿಯೋರ್ವರ ಕೈನಲ್ಲಿದ್ದ ಮೊಬೈಲ್ ನ್ನು ಅಪರಿಚಿತ ವ್ಯಕ್ತಿಯೋರ್ವ ಕಸಿದು ಪರಾರಿಯಾದ ಘಟನೆ ನಗರದ ಗ್ರಾಮಾಂತರ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ನವೀನ್ ಎಂಬವರೇ ಮೊಬೈಲ್ ಕಳೆದುಕೊಂಡ ವ್ಯಕ್ತಿಯಾಗಿದ್ದು, ಇವರು ಗುರುವಾರ ಕಾಲೇಜಿಗೆ ತೆರಳಲೆಂದು ಬೆಳಿಗ್ಗೆ ಬಸ್ ಹತ್ತಲು ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಈ ವೇಳೆ ಅಪರಿಚಿತ ವ್ಯಕ್ತಿಯೋರ್ವ ಅವರ ಕೈನಲ್ಲಿದ್ದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಕುರಿತು ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: