ದೇಶ

ಕಾಶ್ಮೀರದಲ್ಲಿ ಹಿಮಾವೃತ: ಜಮ್ಮು-ಶ್ರೀನಗರ ಹೆದ್ದಾರಿ ಬಂದ್

ಶ್ರೀನಗರ,ಜ.5-ಉತ್ತರ ಭಾರತದಲ್ಲಿನ ಕೊರೆಯುವ ಚಳಿ, ಜಮ್ಮು-ಕಾಶ್ಮೀರದ ಹಿಮದ ಹೊದಿಕೆ ಅಲ್ಲಿನ ಜನರನ್ನು ತತ್ತರಿಸುವಂತೆ ಮಾಡಿದೆ.

ಅಧಿಕ ಪ್ರಮಾಣದಲ್ಲಿ ಹಿಮ ಬೀಳುತ್ತಿರುವುದರಿಂದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಶನಿವಾರ ಬಂದ್ ಆಗಿದೆ. ದಿನದಿಂದ ದಿನಕ್ಕೆ ಕನಿಷ್ಠ ತಾಪಮಾನ ದಾಖಲಾಗುತ್ತಿದೆ. ಹಿಮಾವೃತದಿಂದ ವಾಹನಗಳು ಚಲಸಲಾಗದೆ ಸಾಲುಗಟ್ಟಿ ನಿಂತಿವೆ.

ಗಿರಿ ಶಿಖರ, ಮನೆಗಳ ಮೇಲ್ಚಾವಣಿ, ಗಿಡ ಮರಗಳು, ವಾಹನಗಳ ಮೇಲೆ ಹಿಮ ಬಿದ್ದಿದ್ದು, ಇಡೀ ಪ್ರದೇಶವೇ ಹಿಮವೃತವಾಗಿದೆ. ಒಂದೆಡೆ ಮಕ್ಕಳು ಹಿಮದಲ್ಲಿ ಆಟವಾಡುತ್ತಿದ್ದರೆ, ಮತ್ತೊಂದೆಡೆ ರಸ್ತೆಗಳ ಮೇಲೆ ದಟ್ಟವಾಗಿ ಬೀಳುತ್ತಿರುವ ಹಿಮವನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. (ಎಂ.ಎನ್)

Leave a Reply

comments

Related Articles

error: