Uncategorized

ಶಬರಿಮಲೆ ವಿಚಾರ: ಸರ್ಕಾರ ಜನಮತಗಣನೆ ಮಾಡಲಿ ಪೇಜಾವರ ಶ್ರೀಗಳು

ಉಡುಪಿ,ಜ.5-ಶಬರಿಮಲೆ ವಿಚಾರದಲ್ಲಿ ಕೇರಳ ಸರ್ಕಾರ ಹಠಬಿಟ್ಟು ಜನಮತಗಣನೆ ಮಾಡಬೇಕು ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಪಟ್ಟಂತೆ ಸರ್ಕಾರ ಜನಮತಗಣನೆ ಮಾಡಲಿ. ಹಿಂದೂಗಳ ಮತಗಣನೆ ಮಾಡಲಿ ಅಥವಾ ಧಾಋ್ಮಿಕ ಮುಖಂಡರ ಸಭೆ ಕರೆದು ಇತ್ಯರ್ಥ ಮಾಡಲಿ. ಅದನ್ನು ಬಿಟ್ಟು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಬಾರದು ಎಂದಿದ್ದಾರೆ.

ಶಬರಿಮಲೆ ಬಗ್ಗೆ ಹಲವಾರು ಬಾರಿ ಹೇಳಿಕೆ ಕೊಟ್ಟಿದ್ದೇನೆ. ಕೆಲವರು ನನ್ನ ಹೇಳಿಕೆಯನ್ನು ಗೊಂದಲ ಮಾಡಿಕೊಂಡಿದ್ದಾರೆ. ನಾನು ಶಬರಿಮಲೆ ವಿಚಾರದಲ್ಲಿ ತಟಸ್ಥನಾಗಿದ್ದೇನೆ. ಧಾರ್ಮಿಕ ವಿಚಾರದಲ್ಲಿ ಹಿಂದೆ ನಾನು ಹಲವಾರು ಪರಿವರ್ತನೆಗಳನ್ನು ಮಾಡಿದ್ದೇನೆ. ಹಲವಾರು ಸಂಪ್ರದಾಯ ಅನುಸರಿಸಿದ್ದೇನೆ. ಇದು ಸಂಪ್ರದಾಯ ಮತ್ತು ಶಾಸ್ತ್ರದ ತಿಕ್ಕಾಟ ಎಂದರು.

ಇಂತಹ ವಿಚಾರವನ್ನೆಲ್ಲ ನ್ಯಾಯಾಲಯ, ಜಾತ್ಯಾತೀತ ಸರ್ಕಾರ ತೀರ್ಮಾನ ಮಾಡಬಾರದು. ಹಿಂದೂ ಧಾರ್ಮಿಕ ಮುಖಂಡರು, ಹಿಂದೂ ಜನತೆ ತೀರ್ಮಾನ ಮಾಡಬೇಕು. ಮಹಿಳೆಯರ ವರ್ಗಕ್ಕೆ ಇದನ್ನು ಅಪಮಾನ ಎಂದು ಭಾವಿಸಬಾರದು. ಶಬರಿಮಲೆಗೆ ಇಬ್ಬರು ಮಹಿಳೆಯರ ಪ್ರವೇಶವನ್ನು ಬಿಜೆಪಿ, ಕಾಂಗ್ರೆಸ್ ರಾಜಕೀಯ ಪಕ್ಷಗಳು ವಿರೋಧಿಸಿದೆ. ಜನಾಭಿಪ್ರಾಯಕ್ಕೆ ಮಣಿದು ಶ್ರೀರಾಮ ಸೀತೆಯನ್ನು ಕಾಡಿಗೆ ಕಳುಹಿಸಿದ. ವಾಲ್ಮಿಕಿ ರಾಮಾಯಣದಲ್ಲಿ ಇದು ಉಲ್ಲೇಖ ಇದೆ. ಸಿಎಂ ಪಿಣರಾಯಿ ವಿಜಯನ್ ಉದಾರ ಮನಸ್ಸು ಮಾಡಬೇಕು. ಕೇರಳ ಸರ್ಕಾರ ಹಠಮಾರಿತನದ ನಿಲುವನ್ನು ಬಿಟ್ಟು ಬಿಡಬೇಕು ಎಂದು ಮನವಿ ಮಾಡಿದರು. (ಎಂ.ಎನ್)

Leave a Reply

comments

Related Articles

error: