ಮೈಸೂರು

ಸುಲಿಗೆ -ಬೈಕ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯ ಬಂಧನ : 1,00,000ರೂ. ಬೆಲೆ ಬಾಳುವ ದ್ವಿಚಕ್ರವಾಹನ ವಶ

ಮೈಸೂರು,ಜ.5:- ಮೈಸೂರು ನಗರ ದೇವರಾಜ ಪೊಲೀಸರು ಟೌನ್‍ಹಾಲ್ ಬಳಿ ಕಾರ್ಯಾಚರಣೆ ನಡೆಸಿ, ಹೊಂಡಾ ಆ್ಯಕ್ಟಿವಾ ಸ್ಕೂಟರ್ ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ  ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.

ಬಂಧಿತನನ್ನು ರಾಜೇಂದ್ರನಗರ, ಕೆಸರೆ 1ನೇ ಹಂತ ಕುರಿಮಂಡಿ ನಿವಾಸಿ  ಶೇಖರ @ ಚಂದ್ರ ಬಿನ್ ಮಂಜು @ ರಣಧೀರ( 28) ಎಂದು ಗುರುತಿಸಲಾಗಿದೆ. ಈತನನ್ನು  ದಸ್ತಗಿರಿ ಮಾಡಿ ವಿಚಾರಣೆಗೊಳಪಡಿಸಲಾಗಿ ಈತ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಸುಲಿಗೆ, 02 ದ್ವಿ ಚಕ್ರ ವಾಹನ ಕಳ್ಳತನ ಹಾಗೂ  ಕೃಷ್ಣರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 01 ದ್ವಿ ಚಕ್ರ ವಾಹನ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ. ಬಂಧಿತನಿಂದ 1,00,000ರೂ. ಮೌಲ್ಯದ 03 ದ್ವಿ ಚಕ್ರ ವಾಹನಗಳನ್ನು (01 ಹೊಂಡಾ ಆಕ್ಟೀವಾ ಸ್ಕೂಟರ್ ಮತ್ತು 02 ಹಿರೋ ಹೊಂಡಾ ಪ್ಯಾಷನ್) ಹಾಗೂ ಸುಲಿಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 250 ರೂ.ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಪಾರ್ಕಿಂಗ್ ಸ್ಥಳಗಳಲ್ಲಿ ದ್ವಿ ಚಕ್ರ ವಾಹನಗಳ ಹ್ಯಾಂಡ್ ಲಾಕನ್ನು ಮುರಿದು ವಾಹನಗಳನ್ನು ಕಳ್ಳತನ ಮಾಡುತ್ತಿರುವುದಾಗಿ  ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾನೆ.

ಪತ್ತೆ ಕಾರ್ಯವನ್ನು ಮೈಸೂರು ನಗರದ ಅಪರಾಧ ವಿಭಾಗದ ಡಿ.ಸಿ.ಪಿ ಡಾ. ವಿಕ್ರಂ  ಅಮಟೆ ಮಾಗದರ್ಶನದಲ್ಲಿ, ದೇವರಾಜ ವಿಭಾಗದ ಎ.ಸಿ.ಪಿ.  ಜಿ ಎಸ್ ಗಜೇಂದ್ರಪ್ರಸಾದ್‍ ನೇತೃತ್ವದಲ್ಲಿ, ದೇವರಾಜ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಪ್ರಸನ್ನಕುಮಾರ್, ಪಿ.ಎಸ್.ಐ  ಎಸ್ ರಾಜು ಮತ್ತು ಎಎಸ್‍ಐ ಉದಯಕುಮಾರ್, ಸಿಬ್ಬಂದಿಯವರಾದ ವೇಣುಗೋಪಾಲ, ಸೋಮಶೆಟ್ಟಿ, ಸುರೇಶ್, ಉಮೇಶ್, ನಂದೀಶ ಮತ್ತು ವಸಂತ  ಮಾಡಿದ್ದಾರೆ. (ಎಸ್.ಎಚ್)

Leave a Reply

comments

Related Articles

error: