ಸುದ್ದಿ ಸಂಕ್ಷಿಪ್ತ

ಕಬಡ್ಡಿ ಪಂದ್ಯಾವಳಿ ನಾಳೆ

ಮೈಸೂರು,ಜ.5 : ಪ್ಯಾಲೆಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕರ ಕಬಡ್ಡಿ ಪಂದ್ಯಾವಳಿಯನ್ನು ನಾಳೆ (6) ಬೆಳಗ್ಗೆ 8.30ಕ್ಕೆ ಕುವೆಂಪುನಗರದ ಸೌಗಂಧಿಕಾ ಉದ್ಯಾನವನದಲ್ಲಿ ಏರ್ಪಡಿಸಲಾಗಿದೆ.

ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಉದ್ಘಾಟಿಸಲಿದ್ದಾರೆ. ಕ್ಲಬ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಕೆ.ಚಂದ್ರಶೇಖರೇಗೌಡ, ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಡಿ.ಹೆಚ್.ಸತೀಶ್ ಕುಮಾರ್, ಸಮಾಜದ ಸೇವಕ ಬಿ.ಕೆ.ರಾಜು ಮತ್ತಿತರರು ಹಾಜರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: